ಮಹಾರಾಷ್ಟ್ರದ ಪಂಢರಪುರದ ವಿಠಲನ ದೇಗುಲದಲ್ಲಿ ವೈಭವದ ಆಷಾಢ ಏಕಾದಶಿ: ಸಿಎಂ ಏಕನಾಥ್‌ ಶಿಂಧೆ ಭಾಗಿ

| Published : Jul 18 2024, 01:36 AM IST / Updated: Jul 18 2024, 05:13 AM IST

ಸಾರಾಂಶ

ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಪಂಢರಪುರದ ವಿಠಲನ ದೇಗುಲದಲ್ಲಿ ಅತ್ಯಂತ ವೈಭವದಿಂದ ಆಷಾಢ ಏಕಾದಶಿಯನ್ನು ಆಚರಿಸಲಾಯಿತು.

ಮುಂಬೈ: ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಪಂಢರಪುರದ ವಿಠಲನ ದೇಗುಲದಲ್ಲಿ ಅತ್ಯಂತ ವೈಭವದಿಂದ ಆಷಾಢ ಏಕಾದಶಿಯನ್ನು ಆಚರಿಸಲಾಯಿತು. ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮೃದ್ಧ ಮಳೆ ಬೀಳುವಂತೆ ಪ್ರಾರ್ಥಿಸಿದರು.

ನಂತರ ಮಾತನಾಡಿದ ಅವರು, ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಪಂಢರಪುರವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ದೇಗುಲ ಮತ್ತು ಪಟ್ಟಣದ ಅಭಿವೃದ್ಧಿಯನ್ನು ಇಲ್ಲಿನ ನಿವಾಸಿಗಳೊಂದಿಗೆ ಸಮಾಲೋಚಿಸಿದ ನಂತರವೇ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.