ಸಾರಾಂಶ
ಮಹಿಳಾ ಅಂಧರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ, ಸೋಮವಾರ ಬೆಂಗಳೂರಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬೆಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ, ರಾಜ್ಯ ಸರ್ಕಾರದ ಪರವಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ಆಟಗಾರ್ತಿಯರು ಹಾಗೂ ತಂಡದ ಸಹಾಯಕ ಸಿಬ್ಬಂದಿಯನ್ನು ಬರಮಾಡಿಕೊಂಡರು.
ಬೆಂಗಳೂರು : ಶ್ರೀಲಂಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಅಂಧರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ, ಸೋಮವಾರ ಬೆಂಗಳೂರಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬೆಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ, ರಾಜ್ಯ ಸರ್ಕಾರದ ಪರವಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ಆಟಗಾರ್ತಿಯರು ಹಾಗೂ ತಂಡದ ಸಹಾಯಕ ಸಿಬ್ಬಂದಿಯನ್ನು ಬರಮಾಡಿಕೊಂಡರು.
ಅಂಧ ಕ್ರಿಕೆಟಿಗರ ಸಂಸ್ಥೆ (ಸಿಎಬಿಐ) ವತಿಯಿಂದ ಸನ್ಮಾನ
ಬಳಿಕ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಅಂಧ ಕ್ರಿಕೆಟಿಗರ ಸಂಸ್ಥೆ (ಸಿಎಬಿಐ) ವತಿಯಿಂದ ಆಟಗಾರ್ತಿಯರನ್ನು ಸನ್ಮಾನಿಸಲಾಯಿತು. ಈ ವೇಳೆ ಸಿಎಬಿಐ ಅಧ್ಯಕ್ಷ ಡಾ.ಮಹಾಂತೇಶ್ ಕಿವಡಸಣ್ಣವರ ತಂಡವನ್ನು ಸನ್ಮಾನಿಸಿ ಗೌರವಿಸಿದರು.
ನಗದು ಬಹುಮಾನ
ಇನ್ನು, ವಿಶ್ವಕಪ್ ವಿಜೇತ ತಂಡದ ಸದಸ್ಯರಿಗೆ ಖಾಸಗಿ ಸಂಸ್ಥೆಗಳು ನಗದು ಬಹುಮಾನವನ್ನು ಸಹ ಘೋಷಿಸಿವೆ. ದೆಹಲಿಯ ಚಿಂಟೆಲ್ಸ್ ಗ್ರೂಪ್ತ ತಲಾ 1 ಲಕ್ಷ ರು., ಹಾಗೂ ಲಂಡನ್ ಮೂಲದ ಟೆಕ್ ಕಂಪನಿ ಚಿಪ್‌ಲಾಜಿಕ್ ತಲಾ 25000 ರು. ಬಹುಮಾನ ಘೋಷಿಸಿವೆ.
ಐತಿಹಾಸಿಕ ಸಾಧನೆ: ಮೋದಿ ಭಾರತ ತಂಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಕೊಂಡಾಡಿದ್ದಾರೆ. ‘ವಿಶ್ವಕಪ್ ಟೂರ್ನಿಯುದ್ಧಕ್ಕೂ ಅಜೇಯವಾಗಿ ಉಳಿದು ಟ್ರೋಫಿ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಇದೊಂದು ಐತಿಹಾಸಕ ಸಾಧನೆ. ತಂಡದ ಪ್ರತಿಯೊಬ್ಬ ಆಟಗಾರ್ತಿಯೂ ಚಾಂಪಿಯನ್’ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

;Resize=(128,128))
;Resize=(128,128))
;Resize=(128,128))
;Resize=(128,128))