ಸಾರಾಂಶ
ಉದ್ಧವ್ ಠಾಕ್ರೆ ಬಣದ ಇಬ್ಬರು ನೂತನ ಸಂಸದರು ತಮ್ಮ ಜೊತೆಗಿರುವುದಾಗಿ ಥಾಣೆ ಕ್ಷೇತ್ರದ ಶಿವಸೇನಾ (ಶಿಂಧೆ) ಬಣದ ಸಂಸದ ನರೇಶ್ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಉದ್ಧವ್ ಠಾಕ್ರೆ ಬಣದ ಇಬ್ಬರು ನೂತನ ಶಿವಸೇನಾ ಸಂಸದರು ತಮ್ಮ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನಾ ವಕ್ತಾರ ನರೇಶ್ ಮ್ಹಾಸ್ಕೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಶ್, ‘ಉದ್ಧವ್ ಠಾಕ್ರೆಯವರು ಒಂದು ಸಮುದಾಯದ ಜನರನ್ನು ಬಸ್‌ಗಳಲ್ಲಿ ಕರೆತಂದು ಮತಯಾಚಿಸಿದ ನಡೆಗೆ ಇಬ್ಬರು ನೂತನ ಸಂಸದರು ಅಸಮಾಧಾನ ಹೊಂದಿದ್ದಾರೆ. ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಜೊತೆ ಇನ್ನೂ ನಾಲ್ವರು ಕೂಡಿಕೊಳ್ಳಲಿದ್ದು, ಪ್ರಧಾನಿ ಮೋದಿಯ ಬಲ ಹೆಚ್ಚಿಸಲಿದ್ದಾರೆ’ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಬಣದ 9 ಸಂಸದರಿದ್ದರೆ, ಶಿಂಧೆ ಬಣದಲ್ಲಿ 7 ಸಂಸದರಿದ್ದಾರೆ.