ಸಾರಾಂಶ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್‍ಯಾಟ್‌ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.
ರಾಟ್‌ಹೋಲ್ ತಜ್ಞರಿಗೆ ತಲಾ 50,000ರು. ಪ್ರೋತ್ಸಾಹಧನ
ಉತ್ತರಕಾಶಿ: ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರಿಗೆ ತಲಾ 1 ಲಕ್ಷ ರು. ಹಾಗೂ ರ್‍ಯಾಟ್‌ಹೋಲ್ ತಜ್ಞರಿಗೆ ತಲಾ 50 ಸಾವಿರ ರು. ಪ್ರೋತ್ಸಾಹಧನವನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿತರಿಸಿದರು.ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿರುವ ಚಿನ್ಯಾಲಿಸೌರ್ ಆಸ್ಪತ್ರೆಗೆ ತೆರಳಿದ ಧಾಮಿ, ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ಈ ವೇಳೆ ಮಾತನಾಡಿದ ಅವರು, ‘ಸುರಂಗ ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಅತೀವ ಸಹನೆ ತೋರಿದ ಎಲ್ಲ ಕಾರ್ಮಿಕರಿಗೆ ತಮ್ಮ ಅನಂತಾನಂತ ಧನ್ಯವಾದಗಳು. ಈ ದಿನ ನನಗೆ ಕಾರ್ಮಿಕರ ಕುಟುಂಬಕ್ಕಿಂತಲೂ ಹೆಚ್ಚು ಸಂತೋಷವಾಗುತ್ತಿದೆ. ನೆನ್ನೆಯೇ ನನಗೆ ದೇವ ದೀಪಾವಳಿ ಆಚರಿಸಿದ ಅನುಭವವಾಗಿದೆ ಎಂದರು.