ವಿರೋಧದ ನಡುವೆ 12 ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆಗೆ ಚಾಲನೆ

| N/A | Published : Nov 05 2025, 01:45 AM IST

Voter List
ವಿರೋಧದ ನಡುವೆ 12 ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರದ ಬಳಿಕ ದೇಶಾದ್ಯಂತ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಉದ್ದೇಶಿಸಿರುವ ಚುನಾವಣಾ ಆಯೋಗ, ಪ್ರತಿಪಕ್ಷಗಳ ವಿರೋಧದ ನಡುವೆಯೇ ಮಂಗಳವಾರ 9 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.

ನವದೆಹಲಿ: ಬಿಹಾರದ ಬಳಿಕ ದೇಶಾದ್ಯಂತ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಉದ್ದೇಶಿಸಿರುವ ಚುನಾವಣಾ ಆಯೋಗ, ಪ್ರತಿಪಕ್ಷಗಳ ವಿರೋಧದ ನಡುವೆಯೇ ಮಂಗಳವಾರ 9 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಡಿ.9ರಂದು ಮತದಾರರ ಕರಡು ಪಟ್ಟಿ

ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಆರಂಭವಾಗಿದೆ. ಡಿ.9ರಂದು ಮತದಾರರ ಕರಡು ಪಟ್ಟಿ ಬಿಡುಗಡೆಯಾಗಲಿದ್ದು, ಮುಂದಿನ ವರ್ಷದ ಫೆ.7ರಂದು ಅಂತಿಮಪಟ್ಟಿ ಬಿಡುಗಡೆಯೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಡಿಎಂಕೆ, ಮಮತಾ ವಿರೋಧ:

ಪರಿಷ್ಕರಣೆಗೆ ವಿಪಕ್ಷಗಳ ವಿರೋಧ ಇದ್ದು, ಸೋಮವಾರವಷ್ಟೇ ಡಿಎಂಕೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಪರಿಷ್ಕರನೆಯು ವಿಪಕ್ಷಗಳ ವಿರುದ್ಧ ಷಡ್ಯಂತ್ರ. ಒಬ್ಬನೇ ಒಬ್ಬ ಮತದಾರ ಅನರ್ಹನಾದರೂ ಕೇಂದ್ರ ಸರ್ಕಾರವೇ ಬೀಳಲಿದೆ ಎಂದು ಕಿಡಿಕಾರಿದ್ದಾರೆ.

Read more Articles on