ಸ್ಕೈರೂಟ್‌ನಿಂದ 2ನೇ ಉಪಗ್ರಹ ಉಡಾವಣಾ ಪ್ರಯೋಗ ಯಶಸ್ವಿ

| Published : Mar 29 2024, 12:51 AM IST / Updated: Mar 29 2024, 08:24 AM IST

ISRO skyroot

ಸಾರಾಂಶ

ಬಾಹ್ಯಾಕಾಶ ಉದ್ಯಮದ ಖಾಸಗಿ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ತನ್ನ ವಿಕ್ರಂ-1 ಉಪಗ್ರಹ ಉಡಾವಣಾ ವಾಹಕದಿಂದ ಎರಡನೇ ಬಾರಿಗೆ ಮಾಡಿದ ಪ್ರಯೋಗದಲ್ಲಿ ಬುಧವಾರ ಯಶಸ್ವಿಯಾಗಿದೆ.

ಹೈದರಾಬಾದ್‌: ಬಾಹ್ಯಾಕಾಶ ಉದ್ಯಮದ ಖಾಸಗಿ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ತನ್ನ ವಿಕ್ರಂ-1 ಉಪಗ್ರಹ ಉಡಾವಣಾ ವಾಹಕದಿಂದ ಎರಡನೇ ಬಾರಿಗೆ ಮಾಡಿದ ಪ್ರಯೋಗದಲ್ಲಿ ಬುಧವಾರ ಯಶಸ್ವಿಯಾಗಿದೆ. 

ಕಂಪನಿಯು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಮಾಡಿದ ಪ್ರಯೋಗದಲ್ಲಿ ತನ್ನ ವಾಹಕದಿಂದ ಕಲಾಂ-250 ಎಂಬ ರಾಕೆಟ್‌ ಉಡಾವಣೆ ಮಾಡುವಲ್ಲಿ ಯಶಸ್ವಿಯಾಗಿದೆ. 

ಈ ಕುರಿತು ಸಂತಸ ವ್ಯಕ್ತಪಡಿಸಿದ ಕಂಪನಿಯ ಸಹಸಂಸ್ಥಾಪಕ ಪವನ್‌ ಚಂದ್ರ, ‘ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿರುವ ಸ್ಕೈರೂಟ್‌ ಏರೋಸ್ಪೇಸ್‌ ಮತ್ತೊಂದು ದಾಖಲೆ ಬರೆದಿದ್ದು, ಪರೀಕ್ಷಾ ಉಡಾವಣೆಯಲ್ಲಿ ಎಲ್ಲ ಮಾನದಂಡಗಳನ್ನು ನಮ್ಮ ಕಲಾಂ-250 ಎಂಬ ರಾಕೆಟ್‌ ಪೂರೈಸಿದೆ. 

ಇನ್ನು ಕೆಲವೇ ದಿನಗಳಲ್ಲಿ ಭಾರತದಿಂದ ಅಧಿಕೃತವಾಗಿ ಮೊದಲ ಖಾಸಗಿ ಉಪಗ್ರಹ ಕಕ್ಷೆಗೆ ಹಾರಲಿದೆ’ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ನವೆಂಬರ್‌ 2022ರಲ್ಲಿ ಮೊದಲ ಬಾರಿಗೆ ಪರೀಕ್ಷಾ ಪ್ರಯೋಗವನ್ನು ಮಾಡಿತ್ತು.