ಭಾರತದಿಂದ ರಫ್ತಾಗುವ ವಸ್ತುಗಳಲ್ಲಿ 4ನೇ ಸ್ಥಾನಕ್ಕೇರಿದ ಸ್ಮಾರ್ಟ್‌ಫೋನ್‌!

| Published : May 24 2024, 12:54 AM IST / Updated: May 24 2024, 06:10 AM IST

ಭಾರತದಿಂದ ರಫ್ತಾಗುವ ವಸ್ತುಗಳಲ್ಲಿ 4ನೇ ಸ್ಥಾನಕ್ಕೇರಿದ ಸ್ಮಾರ್ಟ್‌ಫೋನ್‌!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಿಂದ ಹೊರ ದೇಶಗಳಿಗೆ ರಫ್ತಾಗುವ ವಸ್ತುಗಳ ಪೈಕಿ ಸ್ಮಾರ್ಟ್‌ಫೋನ್‌ಗಳು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ರಫ್ತಾಗುತ್ತಿರುವ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.42ರಷ್ಟು ವೃದ್ದಿಯಾಗಿ,  15.6 ಬಿಲಿಯನ್‌ ಡಾಲರ್‌ನಷ್ಟಿದೆ ಎಂದು ವರದಿಯೊಂದು ಹೇಳಿದೆ.

ನವದೆಹಲಿ: ಭಾರತದಿಂದ ಹೊರ ದೇಶಗಳಿಗೆ ರಫ್ತಾಗುವ ವಸ್ತುಗಳ ಪೈಕಿ ಸ್ಮಾರ್ಟ್‌ಫೋನ್‌ಗಳು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ರಫ್ತಾಗುತ್ತಿರುವ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.42ರಷ್ಟು ವೃದ್ದಿಯಾಗಿ, ಒಟ್ಟು ರಫ್ತು ಪ್ರಮಾಣ (₹1.2 ಲಕ್ಷ ಕೋಟಿ) 15.6 ಬಿಲಿಯನ್‌ ಡಾಲರ್‌ನಷ್ಟಿದೆ ಎಂದು ವರದಿಯೊಂದು ಹೇಳಿದೆ.

ಭಾರತದಲ್ಲಿ ಉತ್ಮಾದನೆಯಾಗುತ್ತಿರುವ ಸ್ಮಾರ್ಟ್‌ಫೋನ್‌ ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಸಾಲಿನಲ್ಲಿ ಅಮೆರಿಕ (₹46 ಸಾವಿರ ಕೋಟಿ) ಮೊದಲ ಸ್ಥಾನದಲ್ಲಿದ್ದರೆ, ಇದರ ನಂತರದ ಸ್ಥಾನದಲ್ಲಿ ಯುಎಇ (₹21 ಸಾವಿರ ಕೋಟಿ), ನೆದರ್‌ರ್ಲೆಂಡ್‌ (₹9.9 ಸಾವಿರ ಕೋಟಿ), ಬ್ರಿಟನ್‌ (₹9 ಸಾವಿರ ಕೋಟಿ) ಹಾಗೂ ಇಟಲಿ (₹6.6 ಸಾವಿರ ಕೋಟಿ) . ಇನ್ನು ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್‌ಫೋನ್‌ನ ಒಟ್ಟು ಮೌಲ್ಯ 4.1 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಈ ಪೈಕಿ ಆ್ಯಪಲ್‌ ಕಂಪನಿಯ ಐಫೋನ್‌ ರಫ್ತು ₹1.2 ಲಕ್ಷ ಕೋಟಿನೊಂದಿಗೆ ಸಿಂಹಪಾಲು ಹೊಂದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಹಾಗೂ ವೋಕಲ್‌ ಫಾರ್‌ ಲೋಕಲ್‌ನಿಂದಾಗಿ ಸಾಧ್ಯವಾಗಿದೆ.