ಸಾರಾಂಶ
ತಮ್ಮ ಬಹುಕಾಲದ ಗೆಳೆಯ ಪಾಲಶ್ ಮುಚ್ಚಲ್ ಜತೆ ಭಾನುವಾರ ಮದುವೆಯಾಗಬೇಕಿದ್ದ ತಾರಾ ಕ್ರಿಕೆಟರ್ ಸ್ಮೃತಿ ಮಂಧನಾಗೆ ಆಘಾತ ಎದುರಾಗಿದೆ. ಅವರ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
- ತಂದೆಗೆ ಎದೆನೋವು, ಹೃದಯಾಘಾತದ ಲಕ್ಷಣ
- ಕೆಲ ದಿನಗಳ ಕಾಲ ಆಸ್ಪತ್ರೆ ವಾಸ ಅನಿವಾರ್ಯಸಾಂಗ್ಲಿ: ತಮ್ಮ ಬಹುಕಾಲದ ಗೆಳೆಯ ಪಾಲಶ್ ಮುಚ್ಚಲ್ ಜತೆ ಭಾನುವಾರ ಮದುವೆಯಾಗಬೇಕಿದ್ದ ತಾರಾ ಕ್ರಿಕೆಟರ್ ಸ್ಮೃತಿ ಮಂಧನಾಗೆ ಆಘಾತ ಎದುರಾಗಿದೆ. ಅವರ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ಭಾನುವಾರ ಅಂದರೆ ಸ್ಮೃತಿ ಅವರ ವಿವಾಹ ದಿನದಂದೇ ಅವರ ತಂದೆ ಶ್ರೀನಿವಾಸ್ ಮಂಧನಾ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪರಿಶೀಲಿಸಿದ ವೈದ್ಯರು, ಹೃದಯಾಘಾತದ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ. ಶ್ರೀನಿವಾಸ್ ಅವರಿಗೆ ಸೋಮವಾರ ಆ್ಯಂಜಿಯೋಗ್ರಾಫ್ ಮಾಡಿ ಏನಾಗಿದೆ ಎನ್ನುವುದನ್ನು ಪತ್ತೆ ಹಚಲು ವೈದ್ಯರು ನಿರ್ಧಿರಿಸಿದ್ದಾರೆ ಎನ್ನಲಾಗಿದೆ.ತಂದೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮದುವೆ ಕಾರ್ಯಕ್ರಮವನ್ನು ಮುಂದುವರಿಸಲು ಸ್ಮೃತಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
;Resize=(128,128))
;Resize=(128,128))
;Resize=(128,128))