ವಿಷಪೂರಿತ ಆಯುರ್ವೇದ ಸಿರಪ್‌ ಸೇವಿಸಿ 5 ಸಾವು

| Published : Dec 01 2023, 12:45 AM IST

ವಿಷಪೂರಿತ ಆಯುರ್ವೇದ ಸಿರಪ್‌ ಸೇವಿಸಿ 5 ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮಿಥೈಲ್‌ ಆಲ್ಕೋಹಾಲ್‌ ಅಂಶ ಹೊಂದಿದ್ದ ಆಯುರ್ವೇದಿಕ್‌ ಔಷಧಿ ಸೇವಿಸಿದ ಕಾರಣ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ.

ಅಹಮದಾಬಾದ್: ಮಿಥೈಲ್‌ ಆಲ್ಕೋಹಾಲ್‌ ಅಂಶ ಹೊಂದಿದ್ದ ಆಯುರ್ವೇದಿಕ್‌ ಔಷಧಿ ಸೇವಿಸಿದ ಕಾರಣ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ. ಔಷಧ ಸೇವಿಸಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ‘ಕಲ್ಮೇಘಸವ್ - ಅಸವ ಅರಿಷ್ಟ’ ಎಂಬ ಆಯುರ್ವೇದ ಸಿರಪ್ ಅನ್ನು ಸೇವಿಸಿದ್ದಾರೆ ಎಂದು ಶಂಕಿಸಲಾಗಿದ್ದು, ಖೇಡಾದ ನಡಿಯಾಡ್ ಬಳಿಯ ಬಿಲೋದರ ಗ್ರಾಮದ ದಿನಸಿ ಅಂಗಡಿಯಿಂದ ಸುಮಾರು 50 ಜನರಿಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಿಕ ಹಾಗೂ ಇಬ್ಬರನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಮಿಥೈಲ್‌ ಆಲ್ಕೋಹಾಲ್‌ ವಿಷಕಾರಿ ವಸ್ತುವಾಗಿದ್ದು ಇದನ್ನು ಆಯುರ್ವೇದಿಕ್‌ ಸಿರಪ್‌ಗೆ ಯಾವ ಹಂತದಲ್ಲಿ ಸೇರಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.