ಸಾರಾಂಶ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷ (ಸಿಪಿಪಿ) ಅಧ್ಯಕ್ಷೆಯಾಗಿ ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ ಆಯ್ಕೆ ಆಗಿದ್ದಾರೆ. ಈ ಮೂಲಕ ಅವರು ಲೋಕಸಭೆ ಹಾಗೂ ರಾಜ್ಯಸಭೆಯ ಕಾಂಗ್ರೆಸ್ ಸಂಸದರ ಮುಖ್ಯಸ್ಥೆ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಶನಿವಾರ ನಡೆದ ಸಿಪಿಪಿ ಸಭೆಯಲ್ಲಿ ಸೋನಿಯಾ ಹೆಸರನ್ನು ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪಕ್ಷದ ಎಲ್ಲ ಸಂಸದರು ಸರ್ವಾನುಮತದ ಅಂಗೀಕಾರ ನೀಡಿದರು.
ಇನ್ನು ಕಾಂಗ್ರೆಸ್ ಲೋಕಸಭೆಯ ಸಂಸದೀಯ ನಾಯಕನ (ವಿಪಕ್ಷ ನಾಯಕ) ಆಯ್ಕೆ ಮಾಡುವುದು ಮಾತ್ರ ಬಾಕಿ ಇದೆ.ಮೋದಿ ತಮ್ಮ ಪಕ್ಷ ಮತ್ತು ಅದರ ಮಿತ್ರಪಕ್ಷಗಳೆರಡನ್ನೂ ಬದಿಗೊತ್ತಿ ತಮ್ಮ ಹೆಸರಿನಲ್ಲಿ ಮಾತ್ರ ಜನಾದೇಶವನ್ನು ಕೋರಿದ್ದರು. ಹೀಗಾಗಿ ಚುನಾವಣೆ ಫಲಿತಾಂಶವು ನರೇಂದ್ರ ಮೋದಿ ಅವರ ‘ರಾಜಕೀಯ ಮತ್ತು ನೈತಿಕ ಸೋಲು’. ಅವರು ನಾಯಕತ್ವದ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.