ಸಾರಾಂಶ
ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಜೆಎಂಎಂ ನಾಯಕ ಹೇಮಂತ್ ಸೊರೇನ್, ನ.28 ಗುರುವಾರ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಂಚಿ: ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಜೆಎಂಎಂ ನಾಯಕ ಹೇಮಂತ್ ಸೊರೇನ್, ನ.28 ಗುರುವಾರ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರು 4ನೇ ಭಾರಿ ಸಿಎಂ ಪಟ್ಟಕ್ಕೇರಲಿದ್ದಾರೆ.
ಇಲ್ಲಿನ ಮೊರಹಾಬಾದಿ ಮೈಧಾನದಲ್ಲಿ ನಡೆಯಲಿರುವ ಶಪಥ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರಮಾಣ ಬೋಧಿಸಲಿದ್ದು, ಈ ವೇಳೆ ಪ್ರಮುಖ ರಾಜಕೀಯ ನಾಯಕರು, ಗಣ್ಯರು ಹಾಗೂ ಇಂಡಿಯಾ ಕೂಟದ ಕೆಲ ಸದಸ್ಯರು ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಆಗಮಿಸುವ ನಿರೀಕ್ಷೆಯಿದೆ.ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ ಒಳಗೊಂಡ ಮೈತ್ರಿಕೂಟ 81ರ ಪೈಕಿ 56 ಸ್ಥಾನಗಳನ್ನು ಗೆದ್ದಿತ್ತು. ಬಹರೈತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೊರೇನ್ ಬಿಜೆಪಿಯ ಗಮಾಲಿಯಲ್ ಹೆಮ್ಬ್ರಂ ಅವರನ್ನು 39,791 ಮತಗಳಿಂದ ಸೋಲಿಸಿ ವಿಜಯಿಯಾಗಿದ್ದರು. ಇದೀಗ ರಾಜ್ಯದ ಇತಿಹಾಸದಲ್ಲೇ ಸತತ 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಮೊದಲಿಗ ಅವರಾಗಿದ್ದಾರೆ.