ಜಾರ್ಖಂಡ್‌ನಲ್ಲಿ ಸ್ಪೇನ್‌ ಯುವತಿ ಮೇಲೆ ಗ್ಯಾಂಗ್‌ರೇಪ್‌

| Published : Mar 03 2024, 01:33 AM IST / Updated: Mar 03 2024, 09:30 AM IST

ಜಾರ್ಖಂಡ್‌ನಲ್ಲಿ ಸ್ಪೇನ್‌ ಯುವತಿ ಮೇಲೆ ಗ್ಯಾಂಗ್‌ರೇಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಸ್ಪೇನ್‌ ಮೂಲದ ಯುವತಿಯ ಮೇಲೆ 8 ದುರುಳರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

ಡುಮ್ಕಾ (ಜಾರ್ಖಂಡ್‌): ಜಾರ್ಖಂಡ್‌ನ ಕುರುಮಾಹತ್‌ ಬಳಿ ಟೆಂಟ್‌ ಒಂದರಲ್ಲಿ ತಂಗಿದ್ದ ಸ್ಪೇನ್‌ ಮೂಲದ ವಿದೇಶಿ ಯಾತ್ರಿಕ ಜೋಡಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ. ಯುವತಿಯ ಮೇಲೆ 8 ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಪ್ರವಾಸದ ನಿಮಿತ್ತ ಬಾಂಗ್ಲಾದೇಶದಿಂದ ದ್ವಿಚಕ್ರ ವಾಹನದಲ್ಲಿ ಜಾರ್ಖಂಡ್‌ಗೆ ಬಂದಿದ್ದ ಜೋಡಿ ತಾತ್ಕಾಲಿಕ ಟೆಂಟ್‌ನಲ್ಲಿ ವಿರಮಿಸುತ್ತಿದ್ದರು. ಆಗ ಈ ದುರ್ಘಟನೆ ನಡೆದಿದ್ದು ಅತ್ಯಾಚಾರ ಮಾಡಿದ ಮೂವರನ್ನು ಬಂಧಿಸಲಾಗಿದೆ. ಉಳಿದ ಐವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಜೋಡಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.