ಸಾರಾಂಶ
ಭಾರತೀಯ ಅಂಚೆ ಇಲಾಖೆಯಲ್ಲಿ ಒದಗಿಸಲಾಗುತ್ತಿರುವ ಸ್ಪೀಡ್ ಪೋಸ್ಟ್ ಸೇವೆಗೆ ವೇಗದ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ಜನವರಿಯಿಂದ 24 ಗಂಟೆ ಮತ್ತು 48 ಗಂಟೆಯೊಳಗೆ ಸ್ಪೀಡ್ ಪೋಸ್ಟ್ ತಲುಪುವಂತೆ ಸೇವೆಯನ್ನು ರೂಪಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
- ಪ್ರಸ್ತುತ ಸ್ಪೀಡ್ ಪೋಸ್ಟ್ ಡೆಲಿವರಿಗೆ 3-5 ದಿನ ಬೇಕು
ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿ ಒದಗಿಸಲಾಗುತ್ತಿರುವ ಸ್ಪೀಡ್ ಪೋಸ್ಟ್ ಸೇವೆಗೆ ವೇಗದ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ಜನವರಿಯಿಂದ 24 ಗಂಟೆ ಮತ್ತು 48 ಗಂಟೆಯೊಳಗೆ ಸ್ಪೀಡ್ ಪೋಸ್ಟ್ ತಲುಪುವಂತೆ ಸೇವೆಯನ್ನು ರೂಪಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು, ‘ಈಗಾಗಲೇ ಪ್ರಾಯೋಗಿಕವಾಗಿ ಈ ಸೇವೆ ಜಾರಿಯಲ್ಲಿದೆ. ಮೆಟ್ರೋ ನಗರಗಳಲ್ಲಿ 2 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಡೆಲಿವರಿಯಾಗುತ್ತಿದ್ದು, ಜನವರಿಯಿಂದ ಎಲ್ಲಾ ಕಡೆ 1-2 ದಿನಗಳಲ್ಲಿ ಗ್ಯಾರಂಟಿ ಡೆಲಿವರಿ ಮಾಡಲಾಗುತ್ತದೆ’ ಎಂದು ತಿಳಿಸಿದರು. ಇದರ ಜೊತೆಗೆ ಅಂತಾರಾಷ್ಟ್ರೀಯ ಪೋಸ್ಟ್‌ಗಳಿಗೆ ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.