ಪಾಕ್‌ ನಾಯಕ ರಿಜ್ವಾನ್‌ ವಜಾ : ಅತಿಯಾದ ಧಾರ್ಮಿಕತೆ ಕಾರಣ?

| N/A | Published : Oct 22 2025, 01:03 AM IST

ಪಾಕ್‌ ನಾಯಕ ರಿಜ್ವಾನ್‌ ವಜಾ : ಅತಿಯಾದ ಧಾರ್ಮಿಕತೆ ಕಾರಣ?
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯು ಪಾಕ್‌ ಏಕದಿನ ತಂಡದ ನಾಯಕತ್ವದಿಂದ ಮೊಹಮ್ಮದ್‌ ರಿಜ್ವಾನ್‌ಗೆ ಕೊಕ್ ನೀಡಿ, ಅನುಭವಿ ಕ್ರಿಕೆಟಿಗ ಶಾಹೀನ್‌ ಅಫ್ರಿದಿಗೆ ತಂಡದ ಸಾರಥ್ಯ ವಹಿಸಿದೆ. ರಿಜ್ವಾನ್‌ರ ಅತಿಯಾದ ಧಾರ್ಮಿಕತೆಯೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯು ಪಾಕ್‌ ಏಕದಿನ ತಂಡದ ನಾಯಕತ್ವದಿಂದ ಮೊಹಮ್ಮದ್‌ ರಿಜ್ವಾನ್‌ಗೆ ಕೊಕ್ ನೀಡಿ, ಅನುಭವಿ ಕ್ರಿಕೆಟಿಗ ಶಾಹೀನ್‌ ಅಫ್ರಿದಿಗೆ ತಂಡದ ಸಾರಥ್ಯ ವಹಿಸಿದೆ. ರಿಜ್ವಾನ್‌ರ ಅತಿಯಾದ ಧಾರ್ಮಿಕತೆಯೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.ನ.4ರಿಂದ 8ರ ತನಕ ನಡೆಯಲಿರುವ ದ.ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಲ್ಲಿ ಪಾಕ್‌ ತಂಡವನ್ನು ಅಫ್ರಿದಿ ಮುನ್ನಡೆಸಲಿದ್ದಾರೆ. 

 ವರದಿ ಪ್ರಕಾರ, ರಿಜ್ವಾನ್‌ ಡ್ರೆಸ್ಸಿಂಗ್‌ ಕೋಣೆಯಲ್ಲಿ ಅತಿಯಾಗಿ ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಇದು ಇತರ ಆಟಗಾರರಿಗೆ ಇಷ್ಟವಿರಲಿಲ್ಲ. ಅಲ್ಲದೇ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ, ತಂಡದ ಕಳಪೆ ಪ್ರದರ್ಶನ ಮರೆಮಾಚಲು ಧಾರ್ಮಿಕ ವಿಚಾರಕ್ಕೆ ಒತ್ತು ಕೊಡುತ್ತಿದ್ದರು ಎಂಬ ಆರೋಪವೂ ರಿಜ್ವಾನ್‌ ಮೇಲಿತ್ತು.

ಮತ್ತೊಂದು ವರದಿ ಪ್ರಕಾರ, ರಿಜ್ವಾನ್‌ ಬೆಟ್ಟಿಂಗ್‌ ಅ್ಯಪ್‌ ವಿರೋಧಿಯಾಗಿದ್ದು, ಅಂತಹ ಆ್ಯಪ್‌ಗಳ ಲೋಗೋ ಇರುವ ಜೆರ್ಸಿ ಧರಿಸುವುದಿಲ್ಲ ಎಂದು ಪಿಸಿಬಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಬದಲಿಗೆ ಲೋಗೋ ಇಲ್ಲದ ಜೆರ್ಸಿ ಧರಿಸಿ ಆಡಿದ್ದರು. ಇದು ಕೂಡಾ ಅವರ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.

Read more Articles on