ಅಡಕೆ ರೈತರಿಗೆ ಶಾಕ್‌: 5 ಲಕ್ಷ ಟನ್‌ ಲಂಕಾದಿಂದ ಆಮದು!

| Published : Mar 09 2024, 01:31 AM IST / Updated: Mar 09 2024, 08:26 AM IST

ಅಡಕೆ ರೈತರಿಗೆ ಶಾಕ್‌: 5 ಲಕ್ಷ ಟನ್‌ ಲಂಕಾದಿಂದ ಆಮದು!
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್‌ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.

ಪಿಟಿಐ ನವದೆಹಲಿ

ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್‌ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ. 

ಇದರಿಂದಾಗಿ ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ.ಶ್ರೀಲಂಕಾದಿಂದ ಅಡಕೆ ಆಮದು ಸಂಬಂಧ ಬ್ರಿಟನ್‌ ಮೂಲದ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಒಪ್ಪಂದ ಮಾಡಿಕೊಂಡಿದೆ.

ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್‌ ಸ್ಟಾರ್ ಪ್ರೈವೇಟ್‌ ಲಿಮಿಟೆಡ್‌ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಶುಕ್ರವಾರ ತಿಳಿಸಿದೆ.

2022ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಭಾರತ 53.71 ಕೋಟಿ ರು. ಮೌಲ್ಯದ ಅಡಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಇದು 4.04 ಕೋಟಿ ರು.ಗೆ ಕುಸಿದಿತ್ತು. 

ಇದೀಗ ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್‌ ಕಂಪನಿ ಮುಂದಾಗಿರುವುದರಿಂದ ಸಹಜವಾಗಿಯೇ ಅಡಕೆ ಬೆಳೆಗಾರರು ಕಂಗಾಲಾಗುವಂತಾಗಿದೆ.

ದೇಶದಲ್ಲಿ ಅಡಕೆ ಅಡಕೆ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ದೇಶದ ಹಲವು ಸಂಪ್ರದಾಯ ಹಾಗೂ ಸಮಾರಂಭಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಕೆ ಆಮದು ಮಾಡಿಕೊಳ್ಳುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕೇಜಿಗೆ 351 ರು.ಗಿಂತ ಕಡಿಮೆ ಇಲ್ಲದ ಅಡಕೆ (ಸುಪಾರಿ) ಆಮದಿಗೆ ಮಾತ್ರವೇ ಅವಕಾಶವಿದೆ ಎದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ತಿಳಿಸಿದೆ.