‘ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಷ್ಟೇ ಅಲ್ಲ, ಯಾವ ಶಾ ಬಂದರೂ ಆಳ್ವಿಕೆ ನಡೆಸಲು ಸಾಧ್ಯವಿಲ್ಲ’ ಎಂದು ಸಿಎಂ ಎಂ.ಕೆ. ಸ್ಟಾಲಿನ್‌ ಗುಡುಗಿದ್ದಾರೆ.

ಚೆನ್ನೈ: ‘ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಷ್ಟೇ ಅಲ್ಲ, ಯಾವ ಶಾ ಬಂದರೂ ಆಳ್ವಿಕೆ ನಡೆಸಲು ಸಾಧ್ಯವಿಲ್ಲ’ ಎಂದು ಸಿಎಂ ಎಂ.ಕೆ. ಸ್ಟಾಲಿನ್‌ ಗುಡುಗಿದ್ದಾರೆ.

ಉತ್ತರ ಚೆನ್ನೈನ ತಿರುವಳ್ಳೂರ್‌ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಟಾಲಿನ್‌, ‘ರಾಜ್ಯದ ಹಕ್ಕುಗಳ ಪ್ರಾಬಲ್ಯ ಮತ್ತು ಅತಿಕ್ರಮಣಕ್ಕೆ ತಮಿಳು ಮಣ್ಣು ಎಂದೂ ಅವಕಾಶ ನೀಡಿರಲಿಲ್ಲ. ಚುನಾವಣೆಗೆ ಒಂದು ವರ್ಷ ಬಾಕಿ ಇರುವ ಹೊತ್ತಿನಲ್ಲಿ ತನ್ನ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಬೆದರಿಕೆ ಒಡ್ಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಿಗೆ ಹೆದರಲು ನಾವು ಗುಲಾಮರಲ್ಲ’ ಎಂದಿದ್ದಾರೆ.

ಕೇಂದ್ರ ಸರ್ಕಾರವು ವಿವಿಧ ವಿಷಯಗಳಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಮತ್ತು ಇತ್ತೀಚಿನ ಎಐಎಡಿಎಂಕೆ- ಬಿಜೆಪಿ ಮೈತ್ರಿ ನಡುವೆಯೇ ಸ್ಟಾಲಿನ್ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.