ಸಾರಾಂಶ
ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅವಕಾಶವಿರುವುದಿಲ್ಲ. ಅದರ ಅಧಿಕಾರ ಕೇವಲ ಸಂಸತ್ತಿನಲ್ಲಿ ರಚಿಸಲಾಗುವ ಕಾನೂನುಗಳಿಗೆ ಮಾತ್ರವೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಅವಕಾಶವಿರುವುದಿಲ್ಲ. ಅದರ ಅಧಿಕಾರ ಕೇವಲ ಸಂಸತ್ತಿನಲ್ಲಿ ರಚಿಸಲಾಗುವ ಕಾನೂನುಗಳಿಗೆ ಮಾತ್ರವೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಿಹಾರ ಸರ್ಕಾರ 2015ರಲ್ಲಿ ಹೆಚ್ಚು ಹಿಂದುಳಿದ ಜಾತಿ (ಇಬಿಸಿ) ಪಟ್ಟಿಯಿಂದ ‘ತಂತಿ ತಂತ್ವಾ’ ಜಾತಿಯನ್ನು ತೆಗೆದು, ಅದನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ ‘ಪಾನ್, ಸವಾಸಿ’ಯೊಂದಿಗೆ ಸೇರಿಸಿತ್ತು. ಇದನ್ನು ಸುಪ್ರೀಂ ಪೀಠ ತಿರಸ್ಕರಿಸಿತು. ಪರಿಶಿಷ್ಟ ಜಾತಿಯಲ್ಲಿ ಯಾವುದೇ ಜಾತಿ ಸೇರ್ಪಡೆ, ತೆಗೆಯುವಿಕೆ ಕೇವಲ ಸಂಸತ್ತಿನಲ್ಲಿ ರಚನೆ ಆಗುವ ಕಾನೂನಿಗೆ ಮಾತ್ರವೇ ಇರುತ್ತದೆ. ಹೊರತು, ರಾಜ್ಯ ಸರ್ಕಾರಗಳಿಗಾಗಲಿ, ಪ್ರಧಾನಿ, ರಾಷ್ಟ್ರಪತಿಗಳಿಗಾಗಲಿ ಸ್ವತಂತ್ರವಾಗಿ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಎಂದು ತೀರ್ಪು ನೀಡಿತು.
ಭಾರತ ಆರ್ಥಿಕತೆ ಶೇ.6.8 ಬದಲು ಶೇ.7 ದರದಲ್ಲಿ ವೃದ್ಧಿ: ಐಎಂಫ್‌ವಾಷಿಂಗ್ಟನ್: ಭಾರತದ ಆರ್ಥಿಕತೆ ಈ ವಿತ್ತೀಯ ವರ್ಷದಲ್ಲಿ ಶೇ.6.8ರ ಬದಲು ಶೇ.7ರ ರದದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಹೇಳಿದೆ. ಈ ಹಿಂದೆ ಶೇ.6.8ರ ಬೆಳವಣಿಗೆ ಭವಿಷ್ಯ ನುಡಿದಿದ್ದ ಸಂಸ್ಥೆ ಈಗ ಅದನ್ನು ಪರಿಷ್ಕರಿಸಿದೆ. ಇದೇ ವೇಳೆ, ಭಾರತದ ರೀತಿ ಚೀನಾ ಕೂಡ ಬೆಳವಣಿಗೆ ಕಾಣಲಿದೆ. ಈ ಹಿಂದಿನ ಶೇ.4.6ರ ಅಂದಾಜಿನ ಬದಲು ಶೇ.5ರ ಅಂದಾಜಿನಲ್ಲಿ ಚೀನಾ ಆರ್ಥಿಕತೆ ಬೆಳವಣಿಗೆ ಸಾಧಿಸಲಿದೆ ಎಂದು ಐಎಂಎಫ್ ಹೇಳಿದೆ. ಆದರೆ ಜಪಾನ್ ಹಾಗೂ ಅಮೆರಿಕ ಆರ್ಥಿಕತೆ ಕ್ಷೀಣಿಸಲಿದೆ ಎಂದಿದೆ.