ಕಂಗನಾ ವಿರುದ್ಧ ಹೇಳಿಕೆ ಸುಪ್ರಿಯಾ ವಿರುದ್ಧ ತನಿಖೆ

| Published : Mar 29 2024, 12:47 AM IST / Updated: Mar 29 2024, 08:35 AM IST

ಸಾರಾಂಶ

ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಾಣಾವತ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ವಿರುದ್ಧ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ

ನವದೆಹಲಿ: ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಾಣಾವತ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ವಿರುದ್ಧ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಮಂಡಿ ಕ್ಷೇತ್ರದಲ್ಲಿ ನಿನ್ನ ರೇಟ್ ಎಷ್ಟು’ ಎಂದು ಸುಪ್ರಿಯಾ, ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದರು. ಈ ಸಂಬಂಧ ದಿಲ್ಲಿ ಉಪ ರಾಜ್ಯಪಾಲ ವಿ.ಕೆ ಸಕ್ಸೇನಾ ಸುಪ್ರಿಯಾ ಶ್ರೀನೇತ್ ಪೋಸ್ಟ್ ಮಾಡಿದ ಹಿಂದೆ ಯಾರಿದ್ದಾರೆ ಎಂದು ತನಿಖೆ ಮಾಡಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.

ಹೀಗಾಗಿ ಸುಪ್ರಿಯಾಗೆ ಚಿತಾವಣೆ ನೀಡಿದವರು ಯಾರು? ಯಾರ ಮೊಬೈಲ್ ಫೋನ್ ಬಳಸಿ ಅದನ್ನು ಪೋಸ್ಟ್‌ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ.