ಭಾರತದ ಮುಸ್ಲಿಮರ ಸ್ಥಿತಿ ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ರೀತಿ : ಮೆಹಬೂಬಾ ಮುಫ್ತಿ

| Published : Dec 02 2024, 01:19 AM IST / Updated: Dec 02 2024, 04:42 AM IST

mehbooba mufti

ಸಾರಾಂಶ

‘ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ರೀತಿ ಭಾರತದ ಮುಸ್ಲಿಮರ ಪರಿಸ್ಥಿತಿ ಇದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈ ವಿಚಾರದಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ’ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಶ್ರೀನಗರ: ‘ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ರೀತಿ ಭಾರತದ ಮುಸ್ಲಿಮರ ಪರಿಸ್ಥಿತಿ ಇದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈ ವಿಚಾರದಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ’ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸಂಭಲ್‌ ಮಸೀದಿ ಹಾಗೂ ಅಜ್ಮೇರ್ ದರ್ಗಾ ವಿವಾದಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡದರೆ ಹಾಗೂ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು? ಭಾರತ ಮತ್ತು ಬಾಂಗ್ಲಾದೇಶದ ನಡುವೆ ನನಗೆ ಯಾವುದೇ ವ್ಯತ್ಯಾಸವಿಲ್ಲ’ ಎಂದರು.

‘ಎಲ್ಲಾ ಧರ್ಮದ ಜನರು ಪ್ರಾರ್ಥನೆ ಸಲ್ಲಿಸುವ ಅ ಜ್ಮೇರ್ ಶರೀಫ್ ದರ್ಗಾ ಸಹೋದರತ್ವದ ದೊಡ್ಡ ಉದಾಹರಣೆ. ಈಗ ಅವರು (ಹಿಂದೂ ಸಂಘಟನೆಗಳು) ದೇವಾಲಯವನ್ನು ಹುಡುಕಲು ಹಾಗೂ ಅದನ್ನು ಅಗೆಯಲು ಪ್ರಯತ್ನಿಸುತ್ತಿದ್ದಾರೆ. ಸಂಭಲ್ ಘಟನೆಯು ತುಂಬಾ ದುರದೃಷ್ಟಕರ. ಅಲ್ಲಿ ಅವರ (ಮುಸ್ಲಿಮರ) ಮೇಲೆ ಗುಂಡು ಹಾರಿಸಲಾಗಿದೆ’ ಎಂದರು.