ಸಾರಾಂಶ
ಪಿಟಿಐ ಮುಂಬೈ
ಭಾಷೆ ವಿಚಾರಕ್ಕೆ ಸಂಬಂಧಿಸಿ ಮತ್ತೆ ದನಿ ಎತ್ತಿರುವ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸಮಿತಿ (ಎಂಎನ್‌ಎಸ್), ‘ಮುಂಬೈ ಅನ್ನು ಬಾಂಬೆ ಅಥವಾ ಬಂಬೈ ಎಂದು ನಿಮ್ಮ ಕಾರ್ಯಕ್ರಮದಲ್ಲಿ ಕರೆಯಬೇಡಿ. ಇದನ್ನು ನಿಲ್ಲಿಸದಿದ್ದರೆ ಹೋರಾಟ ಮಾಡುತ್ತೇವೆ’ ಎಂದು ಹಾಸ್ಯ ನಟ ಕಪಿಲ್ ಶರ್ಮಾಗೆ ಎಚ್ಚರಿಸಿದೆ.ಗುರುವಾರ ಮಾತನಾಡಿದ ಎಂಎನ್‌ಎಸ್ ನಾಯಕಿ ಅಮೇಯಾ ಖೋಪ್ಕರ್, ‘ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಮುಂಬೈಯನ್ನು ಬಾಂಬೆ ಅಥವಾ ಬಂಬೈ ಎಂದು ಕರೆಯಲಾಗುತ್ತಿದೆ. ಇದನ್ನು ಖಂಡಿಸುತ್ತೇವೆ. ಇದು ಆಕ್ಷೇಪವಲ್ಲ. ಆಕ್ರೋಶ. ನೀವು ಚೆನ್ನೈ, ಬೆಂಗಳೂರು, ಕೋಲ್ಕತಾವನ್ನು ಸರಿಯಾಗಿ ಕರೆಯುತ್ತೀರಿ ಎಂದಾದರೆ ಮುಂಬೈಗೆ ಯಾಕೆ ಅವಮಾನಿಸುತ್ತೀರಿ?’ ಎಂದಿದ್ದಾರೆ.‘ಇದು ನಿಮ್ಮ ಕರ್ಮಭೂಮಿ. ಇಲ್ಲಿನ ಜನರು ನಿಮ್ಮ ಕಾರ್ಯಕ್ರಮಗಳನ್ನು ಮೆಚ್ಚುತ್ತಾರೆ, ಅವರನ್ನು ಅವಮಾನಿಸಬೇಡಿ. ಅತಿಥಿಗಳಿಗೂ ಮುಂಬೈ ಅನ್ನು ಸರಿಯಾಗಿ ಹೇಳುವುದಕ್ಕೆ ಹೇಳಿ. ಆ ರೀತಿ ಆಗದಿದ್ದಲ್ಲಿ ಎಂಎನ್‌ಎಸ್ ನಿಮ್ಮ ವಿರುದ್ಧ ಹೋರಾಟ ನಡೆಸುತ್ತದೆ’ ಎಂದು ಎಚ್ಚರಿಸಿದ್ದಾರೆ.
==ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ರಿಲಯನ್ಸ್ ಸಹಾಯ ಹಸ್ತ
ಚಂಡೀಗಢ: ಪಂಜಾಬ್‌ನಲ್ಲಿ ಸಂಭವಿಸಿದ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲು ರಿಲಯನ್ಸ್ ಕಂಪನಿಯು ಕಳೆದ ಹಲವಾರು ದಿನಗಳಿಂದ ರಾಜ್ಯದ ಆಡಳಿತ, ಪಂಚಾಯತ್‌ಗಳು ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಪ್ರವಾಹ ಸಂತ್ರಸ್ತ 10,000 ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಅಥವಾ ವೃದ್ಧರನ್ನು ಒಳಗೊಂಡಿರುವ 1,000 ಕುಟುಂಬಗಳಿಗೆ 5,000 ರು.ಗಳ ವೋಚರ್ ನೀಡಲಾಗುತ್ತಿದೆ. ಸುರಕ್ಷಿತ ಕುಡಿಯುವ ನೀರಿಗಾಗಿ ಪೋರ್ಟಬಲ್ ವಾಟರ್ ಫಿಲ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳಾದ ಟಾರ್ಪಾಲಿನ್‌ಗಳು, ಸೊಳ್ಳೆ ಪರದೆಗಳು, ಹಗ್ಗಗಳು ಮತ್ತು ಹಾಸಿಗೆಗಳನ್ನು ವಿತರಿಸಲಾಗುತ್ತಿದೆ.
ಚಂಡೀಗಢ: ಪಂಜಾಬ್‌ನಲ್ಲಿ ಸಂಭವಿಸಿದ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲು ರಿಲಯನ್ಸ್ ಕಂಪನಿಯು ಕಳೆದ ಹಲವಾರು ದಿನಗಳಿಂದ ರಾಜ್ಯದ ಆಡಳಿತ, ಪಂಚಾಯತ್‌ಗಳು ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಪ್ರವಾಹ ಸಂತ್ರಸ್ತ 10,000 ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಅಥವಾ ವೃದ್ಧರನ್ನು ಒಳಗೊಂಡಿರುವ 1,000 ಕುಟುಂಬಗಳಿಗೆ 5,000 ರು.ಗಳ ವೋಚರ್ ನೀಡಲಾಗುತ್ತಿದೆ. ಸುರಕ್ಷಿತ ಕುಡಿಯುವ ನೀರಿಗಾಗಿ ಪೋರ್ಟಬಲ್ ವಾಟರ್ ಫಿಲ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳಾದ ಟಾರ್ಪಾಲಿನ್‌ಗಳು, ಸೊಳ್ಳೆ ಪರದೆಗಳು, ಹಗ್ಗಗಳು ಮತ್ತು ಹಾಸಿಗೆಗಳನ್ನು ವಿತರಿಸಲಾಗುತ್ತಿದೆ.==
ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ: ಭಾರತ-ಮಾರಿಷಸ್ ಸಮ್ಮತಿಮಾರಿಷಸ್ಗೆ 680 ದಶಲಕ್ಷ ಡಾಲರ್ ನೆರವು- 7 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ
ವಾರಾಣಸಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್‌ಗೂಲಂ ನಡುವೆ ವಾರಾಣಸಿಯಲ್ಲಿ ಗುರುವಾರ ನಡೆದ ದ್ವಿಪಕ್ಷೀಯ ಸಭೆ ಯಶಸ್ವಿ ಆಗಿದ್ದು, ನೇಪಾಳಕ್ಕೆ 680 ದಶಲಕ್ಷ ಡಾಲರ್ ನೆರವು ನೀಡಲು ಭಾರತ ನಿರ್ಧರಿಸಿದೆ. ಇದೇ ವೇಳೆ ವ್ಯಾಪಾರವನ್ನುಸ್ಥಳೀಯ ಕರೆನ್ಸಿಯಲ್ಲೇ ಮಾಡುವ ಒಪ್ಪಂದ ಸೇರಿ 7 ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರಗಳನ್ನು ಸಕ್ರಿಯಗೊಳಿಸಲು ಭಾರತ ಮತ್ತು ಮಾರಿಷಸ್ ಕೆಲಸ ಮಾಡುತ್ತಿವೆ. ಎರಡೂ ಬೇರೆ ಬೇರೆ ರಾಷ್ಟ್ರಗಳಾದರೂ ಕನಸು, ಭವಿಷ್ಯ ಒಂದೇ’ ಎಂದರು.‘ಭಾರತ ಮತ್ತು ಮಾರಿಷಸ್ ಎರಡು ದೇಶಗಳು. ಆದರೆ ಕನಸುಗಳು ಮತ್ತು ಭವಿಷ್ಯ ಒಂದೇ. ಹಿಂದೂ ಮಹಾಸಾಗರದಲ್ಲಿ ಉಭಯ ರಾಷ್ಟ್ರಗಳ ನಡುವೆ ಮುಕ್ತ, ಸ್ಥಿರ ಮತ್ತು ಸುರಕ್ಷಿತ ಮತ್ತು ಸಮಾನ ಹಂಚಿಕೆ ಭಾರತದ ಆದ್ಯತೆ. ಮಾರಿಷಸ್‌ನ ವಿಶೇಷ ಆರ್ಥಿಕ ವಲಯದ ಭದ್ರತೆ ಮತ್ತು ಕಡಲ ಸಾಮರ್ಥ್ಯವನ್ನು ಬಲಪಡಿಸಲು ಭಾರತ ಸಂಪೂರ್ಣ ಬದ್ಧ’ ಎಂದರು.ಮುಂದುವರೆದಂತೆ ಮಾತನಾಡಿದ ಅವರು, ‘ಭಾರತ ಯಾವಾಗಲೂ ವಸಾಹತುಶಾಹಿ ಮುಕ್ತ ಮತ್ತು ಮಾರಿಷಸ್‌ನ ಸಾರ್ವಭೌಮತ್ವ ಬೆಂಬಲಿಸಿದೆ. ಇದರಲ್ಲಿ ಭಾರತವು ಮಾರಿಷಸ್‌ಗೆ ದೃಢವಾಗಿ ನಿಂತಿದೆ’ ಎಂದು ಹೇಳಿದರು.
ಸೆ.16ರ ತನಕ ಭಾರತ ಪ್ರವಾಸದಲ್ಲಿರುವ ರಾಮ್‌ಗೂಲಮ್ ಅವರು ಈ ವೇಳೆ ಅಯೋಧ್ಯೆ ಮತ್ತು ತಿರುಪತಿಗೂ ಭೇಟಿ ನೀಡಲಿದ್ದಾರೆ.==
ರಷ್ಯಾ ಸೇನೆ ಸೇರಬೇಡಿ: ನಾಗರಿಕರಿಗೆ ಭಾರತ ಎಚ್ಚರಿಕೆಭಾರತೀಯರ ನೇಮಿಸಿಕೊಳ್ಳಬೇಡಿ
ರಷ್ಯಾ ಸರ್ಕಾರಕ್ಕೆ ಮತ್ತೆ ಆಗ್ರಹ
ನವದೆಹಲಿ: ‘ರಷ್ಯಾ ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಅಂತೆಯೇ ಪ್ರಸ್ತುತ ಸೇನೆಯಲ್ಲಿರುವವರನ್ನು ಕರ್ತವ್ಯದಿಂದ ಮುಕ್ತಗೊಳಿಸಬೇಕು’ ಎಂದು ಭಾರತ ರಷ್ಯಾದ ಬಳಿ ಆಗ್ರಹಿಸಿದೆ.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ರಣಧೀರ್ ಜೈಸ್ವಾಲ್, ಈ ಬಗ್ಗೆ ಭಾರತೀಯರಿಗೂ ಎಚ್ಚರಿಕೆ ನೀಡಿದ್ದಾರೆ. ‘ರಷ್ಯಾ ಸೇನೆಯಿಂದ ನೇಮಕಾತಿಯ ಅವಕಾಶ ಬಂದರೆ ಯಾವುದೇ ಕಾರಣಕ್ಕೂ ಅದಕ್ಕೊಪ್ಪಬೇಡಿ. ಈಗಾಗಲೇ ರಷ್ಯಾ ಸೇನೆಯಲ್ಲಿದ್ದು ಹತರಾಗಿರುವವರ ಪರಿವಾರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ.
‘ರಷ್ಯಾ ಸೇನೆಯು ಭಾರತೀಯರನ್ನು ನೇಮಿಸಿಕೊಳ್ಳುವ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಇದರಿಂದ ಪ್ರಾಣಾಪಾಯವಿರುವ ಕಾರಣ ಸರ್ಕಾರ ಈ ಬಗ್ಗೆ ಆಗಾಗ ಎಚ್ಚರಿಸುತ್ತಿದೆ. ನಮ್ಮ ಕಳವಳವನ್ನು ರಷ್ಯಾದ ಅಧಿಕಾರಿಗಳ ಗಮನಕ್ಕೂ ತಂದಿದ್ದು, ಭಾರತೀಯರ ನೇಮಕ ನಿಲ್ಲಿಸುವಂತೆ ಆಗ್ರಹಿಸಿದ್ದೇವೆ’ ಎಂದಿದ್ದಾರೆ.ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಸೇನೆಯು ಭಾರತೀಯರನ್ನೂ ಕಳಿಸುತ್ತಿದೆ ಹಾಗೂ ಹಲವರು ಈಗಾಗಲೇ ಮೃತಪಟ್ಟಿದ್ದಾರೆ ಎಂಬ ಆರೋಪ ತಿಂಗಳುಗಳ ಹಿಂದಿನಿಂದಲೇ ಕೇಳಿಬರುತ್ತಿದೆ.==
ಕತಾರ್ ಮೇಲೆ ದಾಳಿ: ನೆತನ್ಯಾಹುಗೆ ಟ್ರಂಪ್ ನೇರಾನೇರ ತರಾಟೆಲಾಡೆನ್ ಮೇಲೆ ಅಮೆರಿಕ ಮಾಡಿದ್ದನ್ನೇ ನಾನೂ ಮಾಡಿದೆ: ನೆತನ್ಯಾಹು
ವಾಷಿಂಗ್ಟನ್: ಕತಾರ್‌ನಲ್ಲಿ ಹಮಾಸ್ ನಾಯಕರ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದು, ‘ಇದು ಜಾಣತನದ ನಿರ್ಧಾರ ಅಲ್ಲ. ಇದರಿಂದ ಕತಾರ್ ಬಳಸಿಕೊಂಡು ಕದನವಿರಾಮ ಸಾರುವ ನಮ್ಮ ಯತ್ನಕ್ಕೆ ಹಿನ್ನಡೆ ಆಗಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ನೇರಾರೇರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.ಇದೇ ವೇಳೆ ಟ್ರಂಪ್, ಟ್ರಂಪ್ ದಾಳಿ ಯಶಸ್ವಿಯಾಗಿದೆಯೇ ಎಂದು ಕೇಳಿದರು. ನೆತನ್ಯಾಹು ಅವರು ಇನ್ನೂ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.ಆದಾಗ್ಯೂ ನೆತನ್ಯಾಹು ಟ್ರಂಪ್ ಎದುರು ತಮ್ಮ ನಿರ್ಧಾರ ಸಮರ್ಥಿಸಿಕೊಂಡರು. ಬಳಿಕ ವಿಡಿಯೋ ಹೇಳಿಕೆ ನೀಡಿ, ‘ಅಮೆರಿಕವು ಅಫ್ಘಾನಿಸ್ತಾನ ಉಗ್ರರ ಮೇಲೆ ವಾಯುದಾಳಿ ಮಾಡಿತ್ತು. ಪಾಕ್‌ನಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು ಸಾಯಿಸಿತು. ನಾನು ಕೂಡ ಅದನ್ನೇ ಮಾಡಿದ್ದೇನೆ’ ಎಂದಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಇಸ್ರೇಲ್ ದಾಳಿಯನ್ನು ಖಂಡಿಸಿದ್ದರು.