ಅಧ್ಯಯನಕ್ಕಾಗಿ ಪ್ರಯೋಗಾಲಯವನ್ನು ಮಾಡುತ್ತೇವೆಂದು ಡ್ರಗ್ಸ್‌ ಉತ್ಪಾದನೆ : 5 ವಿದ್ಯಾರ್ಥಿಗಳ ಬಂಧನ

| Published : Oct 25 2024, 01:00 AM IST / Updated: Oct 25 2024, 04:58 AM IST

ಸಾರಾಂಶ

ಅಧ್ಯಯನಕ್ಕಾಗಿ ಪ್ರಯೋಗಾಲಯವನ್ನು ಮಾಡುತ್ತೇವೆಂದು ಪೋಷಕರನ್ನು ನಂಬಿಸಿ ವಿದ್ಯಾರ್ಥಿಗಳ ತಂಡವೊಂದು ಮೆಥಾಂಪೆಟೈಮೆನ್ ಡ್ರಗ್ಸ್‌ನ್ನು (ಎಂಡಿ) ಉತ್ಪಾದಿಸುತ್ತಿದ್ದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಅಧ್ಯಯನಕ್ಕಾಗಿ ಪ್ರಯೋಗಾಲಯವನ್ನು ಮಾಡುತ್ತೇವೆಂದು ಪೋಷಕರನ್ನು ನಂಬಿಸಿ ವಿದ್ಯಾರ್ಥಿಗಳ ತಂಡವೊಂದು ಮೆಥಾಂಪೆಟೈಮೆನ್ ಡ್ರಗ್ಸ್‌ನ್ನು (ಎಂಡಿ) ಉತ್ಪಾದಿಸುತ್ತಿದ್ದ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವಿದ್ಯಾರ್ಥಿಗಳು ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.

ರಸಾಯನ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ, ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸಹಾಯ ಮಾಡಿದ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಈ 7 ಮಂದಿ ಸೇರಿಕೊಂಡು ಓರ್ವನ ಮನೆಯಲ್ಲಿ ಲ್ಯಾಬ್‌ ಆರಂಭಿಸಿ, ಅಧ್ಯಯನಕ್ಕಾಗಿ ಪ್ರಯೋಗಾಲಯ ಪ್ರಾರಂಭಿಸಿರುವುದಾಗಿ ಪೋಷಕರನ್ನು ನಂಬಿಸಿದ್ದರು. ಈ ನೆಪದಲ್ಲಿ ರಾಸಾಯಾನಿಕಗಳನ್ನು ಬಳಸಿ ಎಂಡಿ ಡ್ರಗ್ಸ್ ಉತ್ಪಾದನೆಗೆ ಮುಂದಾಗಿದ್ದರು. ಬೇಕಾದ ಸಾಮಗ್ರಿಗಳ ಖರೀದಿಗೆಂದೇ 3 ಲಕ್ಷ ರು. ಬಳಸಿದ್ದರು.

ಈ ನಡುವೆ ವಿದ್ಯಾರ್ಥಿಗಳು ಡ್ರಗ್ಸ್‌ ತಯಾರಿಸುತ್ತಿದ್ದಾರೆ ಎನ್ನುವ ಸುಳಿವಿನ ಮೇರೆಗೆ ಮಾದಕ ವಸ್ತು ಗುಪ್ತಚರ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 250 ಗ್ರಾಂ ಮೆಥಾಂಪೆಟೈಮೆನ್ ಡ್ರಗ್ಸ್‌ ಹಾಗೂ ಕೆಲ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.