ಮೋದಿ ಮ್ಯಾಜಿಕ್‌ ನಡೆಯಲ್ಲ, ಆದರೆ ಬಿಜೆಪಿ ಹೆಚ್ಚು ಸ್ಥಾನ: ಸುಬ್ರಹ್ಮಣ್ಯನ್‌ಸ್ವಾಮಿ

| Published : Feb 26 2024, 01:32 AM IST

ಮೋದಿ ಮ್ಯಾಜಿಕ್‌ ನಡೆಯಲ್ಲ, ಆದರೆ ಬಿಜೆಪಿ ಹೆಚ್ಚು ಸ್ಥಾನ: ಸುಬ್ರಹ್ಮಣ್ಯನ್‌ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುತ್ವದಿಂದಾಗಿ ಈ ಬಾರಿ ಬಿಜೆಪಿಗೆ ಹೆಚ್ಚು ಸ್ಥಾನ ಲಭಿಸಲಿದೆ ಎಂದು ಹೇಳುವ ಮೂಲಕ ಸುಬ್ರಹ್ಮಣ್ಯನ್‌ ಸ್ವಾಮಿ ವಿವಾದ ಸೃಷ್ಟಿಸಿದ್ದಾರೆ.

ಪಟನಾ: ಬಿಜೆಪಿಯು ಈ ಬಾರಿ ಖಂಡಿತವಾಗಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.

ಆದರೆ ಅದು ಪ್ರಧಾನಿ ಮೋದಿ ಮಾಡಿದ ಮ್ಯಾಜಿಕ್‌ನಿಂದಲ್ಲ. ಬದಲಾಗಿ ಬಿಜೆಪಿಯ ಅವಧಿಯಲ್ಲಿ ಹಿಂದುತ್ವದ ಕುರಿತು ಜಾಗೃತಿ ಮೂಡಿದ ಫಲವಾಗಿ ಎಂದು ಹಿರಿಯ ರಾಜಕಾರಣಿ ಸುಬ್ರಹ್ಮಣಿಯನ್‌ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಲಾ ಕಾಂಕ್ಲೇವ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಸ್ವಾಮಿ ‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗತ ಸಾಧನೆಗಿಂತ ಸಂಘಟನೆ ಮತ್ತು ಸಿದ್ಧಾಂತಕ್ಕೆ ಹೆಚ್ಚಿನ ಬೆಲೆ ಕೊಡಲಾಗುತ್ತದೆ.

ಕೆಲವರು ಮೋದಿ ಮ್ಯಾಜಿಕ್‌ ಇದೆ ಎನ್ನುತ್ತಾರೆ. ಆದರೆ ಆ ಅಭಿಪ್ರಾಯಕ್ಕೆ ನಾವು ಮನ್ನಣೆ ಕೊಡಬೇಕಿಲ್ಲ. ಅದು ಮೂಲತಃ ಕಾಂಗ್ರೆಸ್‌ ಸಂಸ್ಕೃತಿಯಾಗಿದೆ’ ಎಂದು ಮೋದಿಗೆ ಕುಟಕಿದರು.