ಸಂವಿಧಾನಕ್ಕೆ ಅಂಬೇಡ್ಕರ್‌ಗಿಂತ ನೆಹರು ಕೊಡುಗೆ ಹೆಚ್ಚು: ಸುಧೀಂದ್ರ

| Published : Jan 28 2024, 01:19 AM IST

ಸಂವಿಧಾನಕ್ಕೆ ಅಂಬೇಡ್ಕರ್‌ಗಿಂತ ನೆಹರು ಕೊಡುಗೆ ಹೆಚ್ಚು: ಸುಧೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್‌ರನ್ನು ಸಂವಿಧಾನದ ಪಿತಾಮಹ ಎನ್ನುವುದು ಸರಿಯಲ್ಲ ಎಂಬ ಸುಧೀಂದ್ರ ಕುಲಕರ್ಣಿ ಅಭಿಪ್ರಾಯಕ್ಕೆ ಸ್ಯಾಮ್‌ ಪಿತ್ರೋಡಾ ಕೂಡ ಬೆಂಬಲ ನೀಡಿದ್ದಾರೆ.

ನವದೆಹಲಿ: ಭಾರತದ ಸಂವಿಧಾನದ ಕರಡು ರಚನೆಗೆ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಹೆಚ್ಚು ಕೊಡುಗೆ ನೀಡಿದ್ದಾರೆಯೇ ಹೊರತು ಡಾ। ಬಿ.ಆರ್.ಅಂಬೇಡ್ಕರ್‌ ಅವರಲ್ಲ ಎಂದು ರಾಜಕೀಯ ಮುಖಂಡ ಸುಧೀಂದ್ರ ಕುಲಕರ್ಣಿ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಕುಲಕರ್ಣಿ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.‘ಸಂವಿಧಾನ ಹಾಗೂ ಅದರ ಪೀಠಿಕೆಗೆ ಹೆಚ್ಚು ಕೊಡುಗೆ ನೀಡಿದ್ದು ಯಾರು? ನೆಹರು, ಅಂಬೇಡ್ಕರ್‌ ಅಲ್ಲ’ ಎಂಬ ತಲೆಬರಹದಡಿ ಡಿಜಿಟಲ್‌ ಮಾಧ್ಯಮವಾಗಿರುವ ‘ಕ್ವಿಂಟ್‌’ಗೆ ಲೇಖನ ಬರೆದಿರುವ ಸುಧೀಂದ್ರ ಕುಲಕರ್ಣಿ, ಸಂವಿಧಾನ ರಚನೆಯ ಶ್ರೇಯವನ್ನು ನೆಹರು ಅವರಿಗೆ ನೀಡಲು ಯತ್ನಿಸಿದ್ದಾರೆ. ಸಾಮಾನ್ಯವಾಗಿ ಸಂವಿಧಾನದ ಕರಡು ರಚನೆಗೆ ಡಾ। ಅಂಬೇಡ್ಕರ್‌ ಕಾರಣ ಎಂದು ಹೇಳಲಾಗುತ್ತದೆ.ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಮಾಜಿ ಆಪ್ತರೂ ಆಗಿರುವ ಕುಲಕರ್ಣಿ ಅವರ ಅಭಿಪ್ರಾಯವನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸಲಹೆಗಾರರಾಗಿದ್ದ ಹಾಗೂ ರಾಹುಲ್‌ ಗಾಂಧಿ ಅವರ ನಿಕಟವರ್ತಿಯಾಗಿರುವ ಸ್ಯಾಮ್‌ ಪಿತ್ರೋಡಾ ಅವರು ಕೂಡ ಬೆಂಬಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳಿಕ ಅದನ್ನು ಅಳಿಸಿ ಹಾಕಿದ್ದಾರೆ.ಬಿಜೆಪಿ ಕಿಡಿ:ಅಂಬೇಡ್ಕರ್‌ ಅವರನ್ನು ವಿರೋಧಿಸುವ ದೊಡ್ಡ ಇತಿಹಾಸವನ್ನೇ ಹೊಂದಿರುವ ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಸಂವಿಧಾನಶಿಲ್ಪಿಗೆ ಅಗೌರವ ತೋರುತ್ತಲೇ ಬಂದಿದೆ. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಭಾರತ ರತ್ನವನ್ನೂ ಕೊಟ್ಟಿರಲಿಲ್ಲ. ಚುನಾವಣೆಯಲ್ಲೂ ಅವರನ್ನು ಸೋಲಿಸಿತ್ತು ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲ ಅವರು ಹೇಳಿದ್ದಾರೆ.