ಸಾರಾಂಶ
ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರನ್ ಭೂಕುಸಿತದಿಂದ ಮನೆ ಕಳೆದುಕೊಂಡಿರುವ ವಯನಾಡು ಸಂತ್ರಸ್ತರಿಗೆ 15 ಕೋಟಿ ರು. ದೇಣಿಗೆ ಹಾಗೂ 300 ಮನೆಯನ್ನು ನಿರ್ಮಿಸಿಕೊಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾನೆ.
ನವದೆಹಲಿ: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರನ್ ಭೂಕುಸಿತದಿಂದ ಮನೆ ಕಳೆದುಕೊಂಡಿರುವ ವಯನಾಡು ಸಂತ್ರಸ್ತರಿಗೆ 15 ಕೋಟಿ ರು. ದೇಣಿಗೆ ಹಾಗೂ 300 ಮನೆಯನ್ನು ನಿರ್ಮಿಸಿಕೊಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾನೆ.
ಸದ್ಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ತಮ್ಮ ನೆರವನ್ನು ಸ್ವೀಕರಿಸುವಂತೆ ಕೇರಳ ಸಿಎಂಗೆ ಪತ್ರ ಬರೆದಿದ್ದಾರೆ. ‘ ಕೇರಳದ ಪರಿಹಾರ ನಿಧಿಗೆ ನೀಡಬೇಕಂತಿರುವ 15 ಕೋಟಿ ರು. ಹಣವನ್ನು ಸ್ವೀಕರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಆ ಹಣವನ್ನು ಹೊರತುಪಡಿಸಿ ನಾನು ಸಂತ್ರಸ್ತರಿಗೆ ತುರ್ತು ಅಗತ್ಯತೆಯ ನೆಲೆಯಲ್ಲಿ 300 ಮನೆಯನ್ನು ನಿರ್ಮಿಸಿಕೊಡಲು ನಿರ್ಧರಿಸಿದ್ದೇನೆ’ ಎಂದು ತಮ್ಮ ವಕೀಲರ ಮೂಲಕ ಕೇರಳ ಸಿಎಂಗೆ ಪತ್ರ ಬರೆದಿದ್ದಾರೆ. ಆದರೆ ಕೇರಳ ಸರ್ಕಾರ ಸುಕೇಶ್ ಚಂದ್ರಶೇಖರನ್ ಮನವಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.ವಿಶೇಷವೆಂದರೆ ಈ ಮನೆಯ ಪ್ರಮಾಣ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಎನ್‌ಎಸ್‌ಎಸ್ ಸಂಘಟನೆಗಳು ಘೋಷಿಸಿರುವ ತಲಾ 100 ಮನೆಗಳಿಗಿಂತಲೂ ಹೆಚ್ಚು.