ಸಾರಾಂಶ
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆಂದು ತಂದ ಸಮೋಸಾ ‘ಕಾಣೆ’ ಆದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಶನಿವಾರ ಇಲ್ಲಿನ ಬಿಜೆಪಿ ಕಾರ್ಯಕರ್ತರು ಒಂದು ಕಡೆ ಸಮೋಸಾ ಪಾರ್ಟಿ ಮಾಡಿದರೆ, ಇನ್ನೊಂದು ಕಡೆ ವ್ಯಂಗ್ಯವಾಗಿ ’ಸಮೋಸಾ ಪ್ರತಿಭಟನೆ’ ಮಾಡಿದ್ದಾರೆ.
ಶಿಮ್ಲಾ: ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆಂದು ತಂದ ಸಮೋಸಾ ‘ಕಾಣೆ’ ಆದ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಶನಿವಾರ ಇಲ್ಲಿನ ಬಿಜೆಪಿ ಕಾರ್ಯಕರ್ತರು ಒಂದು ಕಡೆ ಸಮೋಸಾ ಪಾರ್ಟಿ ಮಾಡಿದರೆ, ಇನ್ನೊಂದು ಕಡೆ ವ್ಯಂಗ್ಯವಾಗಿ ’ಸಮೋಸಾ ಪ್ರತಿಭಟನೆ’ ಮಾಡಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿಮ್ಲಾದಲ್ಲಿ ಸುಖ್ವಿಂದರ್ ಸಿಂಗ್ ಅವರ ಭಾವಚಿತ್ರಕ್ಕೆ ಸಮೋಸಾ ತಿನ್ನಿಸಿ ಹಾಗೂ ಇತರರಿಗೆ ಹಂಚಿ ಸಮೋಸಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ‘ಸುಖು ಜೀ ಕಾ ಸಮೋಸಾ ಕಿಸ್ನೆ ಖಾಯಾ?’ (ಸಿಎಂ ಸುಖು ಅವರ ಸಮೋಸಾ ತಿಂದವರು ಯಾರು?) ಎಂದು ಘೋಷಣೆಗಳನ್ನು ಕೂಗುವ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಇನ್ನೊಂದು ಕಡೆ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಸಮೋಸಾ ಔತಣವನ್ನು ಏರ್ಪಡಿಸಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಹರಟೆ ಹೊಡೆಯುತ್ತಾ ಸಮೋಸಾ ಸವಿದಿದ್ದಾರೆ, ಈ ವೀಡಿಯೊ ವೈರಲ್ ಆಗಿದೆ.