ಅಯೋಧ್ಯೆ: ರಾಮಮೂರ್ತಿಯ ಮೇಲೆ ಸೂರ್ಯರಶ್ಮಿ ಪ್ರಯೋಗ ಸಕ್ಸಸ್‌

| Published : Apr 15 2024, 01:19 AM IST / Updated: Apr 15 2024, 05:48 AM IST

ಸಾರಾಂಶ

ರಾಮಮಂದಿರದಲ್ಲಿ ಏ.17ರ ರಾಮನವಮಿ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳುವ ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಅಯೋಧ್ಯೆ: ರಾಮಮಂದಿರದಲ್ಲಿ ಏ.17ರ ರಾಮನವಮಿ ದಿನ ಬಾಲರಾಮನ ಮೂರ್ತಿಯ ಮೇಲೆ ಸೂರ್ಯರಶ್ಮಿಯ ಕಿರಣ ಬೀಳುವ ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಆಸ್ಟ್ರೋಫಿಸಿಕ್ಸ್‌ ತಜ್ಞರು ಈ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಏ.17ರ ರಾಮನವಮಿಯಂದು ಸಹ ಬಾಲರಾಮನ ಮೂರ್ತಿಯ ಮೇಲೆ ಮೂರು ಕನ್ನಡಿಗಳ ಸಹಾಯದಿಂದ ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳಲಿದೆ. ಅದನ್ನು ದೂರದರ್ಶನ ನೇರಪ್ರಸಾರ ಮಾಡಲಿದ್ದು, ಜಗತ್ತಿನಾದ್ಯಂತ ಜನರು ಈ ತಂತ್ರಜ್ಞಾನ ಕೌತುಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದು ಟ್ರಸ್ಟ್‌ ಪ್ರಕಟಿಸಿದೆ.

ಆಯೋಧ್ಯೆಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಟಿಟಿಡಿ ಉಪಾಯ ತಿರುಪತಿ: ಅಯೋಧ್ಯೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು, ಸರತಿ ಸಾಲು, ನೀರಿನ ಘಟಕ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ರಾಮಮಂದಿರ ಟ್ರಸ್ಟ್‌ಗೆ ತಿರುಮಲ ತಿರುಪತಿ ದೇಗಲದ (ಟಿಟಿಡಿ) ಎಂಜಿನಿಯರ್‌ಗಳ ತಂಡ ಸಲಹೆಗಳನ್ನು ನೀಡಿದೆ.

ರಾಮಮಂದಿರ ಟ್ರಸ್ಟ್‌ ಆಹ್ವಾನದ ಮೇಲೆ ಕಳೆದ ಫೆ.16 ಮತ್ತು 17ರಂದು ಟಿಟಿಡಿ ಎಂಜಿನಿಯರ್‌ಗಳ ತಂಡವೊಂದು ಅಯೋಧ್ಯೆಗೆ ಭೇಟಿ ನೀಡಿತ್ತು. ದೇಗುಲದಲ್ಲಿ ಜನಸಂದಣಿ, ಸರತಿ ಸಾಲು, ನೀರಿನ ಘಟಕ, ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ಬಗ್ಗೆ ವರದಿಯನ್ನು ಸಲ್ಲಿಸಿದ್ದು, ಈ ಕುರಿತು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಸೇರಿದಂತೆ ಇನ್ನಿತರರು ಇದ್ದರು.