ಸುನಿತಾ ಅಂತರಿಕ್ಷ ಯಾನ ಹಠಾತ್‌ ರದ್ದು

| Published : May 08 2024, 01:04 AM IST

ಸಾರಾಂಶ

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಒಳಗೊಂಡ ನಾಸಾದ ಬಾಹ್ಯಾಕಾಶ ಉಡ್ಡಯನ ಮಂಗಳವಾರ ಕಡೆಯ ಕ್ಷಣದಲ್ಲಿ ರದ್ದಾಗಿದೆ.

ಫ್ಲೋರಿಡಾ: ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಒಳಗೊಂಡ ನಾಸಾದ ಬಾಹ್ಯಾಕಾಶ ಉಡ್ಡಯನ ಮಂಗಳವಾರ ಕಡೆಯ ಕ್ಷಣದಲ್ಲಿ ರದ್ದಾಗಿದೆ.

ಉಡ್ಡಯನಕ್ಕೂ ಕೆಲವೇ ಕ್ಷಣಗಳ ಮೊದಲು ಬೋಯಿಂಗ್‌ ನೌಕೆ ಹೊತ್ತೊಯ್ಯುತ್ತಿದ್ದ ಅಟ್ಲಾಸ್‌ ವಿ ರಾಕೆಟ್‌ನ ಆಕ್ಸಿಜನ್‌ ರಿಲೀಫ್‌ ವಾಲ್ವನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡ್ಡಯನವನ್ನು ರದ್ದುಗೊಳಿಸಲಾಯಿತು. ಈ ವೇಳೆಗಾಗಲೇ ಸುನಿತಾ ಮತ್ತು ಅವರ ಸಹಯಾತ್ರಿ ಬಚ್‌ ವಿಲ್‌ಮೋರ್‌ ನೌಕೆ ಏರಿ ಕುಳಿತಿದ್ದರು. ತಾಂತ್ರಿಕ ದೋಷವನ್ನು ಪೂರ್ಣವಾಗಿ ಅಧ್ಯಯನ ಮಾಡಲು ಸಮಯ ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಉಡ್ಡಯನವನ್ನು ಮೇ 10ರ ಶುಕ್ರವಾರಕ್ಕೆ ಮುಂದೂಡಲಾಗಿದೆ.

ನಾಸಾ ಇದೇ ಮೊದಲ ಬಾರಿಗೆ ಬೋಯಿಂಗ್‌ ನೌಕೆಯನ್ನು ಗಗನಯಾನಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲು ಬಳಸುತ್ತಿದೆ. ಇನ್ನೊಂದೆಡೆ ಇದು ಸುನಿತಾ ಅವರಿಗೆ ಮೂರನೇ ಯಾತ್ರೆಯಾಗಿದೆ.