ಮಾಯಾವತಿ ಉತ್ತರಾಧಿಕಾರಿ ಹುದ್ದೆಯಿಂದ ಆನಂದ್‌ ವಜಾ

| Published : May 08 2024, 01:04 AM IST

ಸಾರಾಂಶ

ಮಾಯಾವತಿ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಆನಂದ್‌ ಶರ್ಮಾ ಅವರನ್ನು ಅಪ್ರಬುದ್ಧ ಎಂಬ ಕಾರಣ ನೀಡಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಲಖನೌ: ಬಿಎಸ್‌ಪಿಯಲ್ಲಿ ಮಂಗಳವಾರ ಮಹತ್ವದ ವಿದ್ಯಮಾನ ನಡೆದಿದ್ದು, ಪಕ್ಷದ ಅಧಿನಾಯಕಿ ಮಾಯಾವತಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತ ಆಗಿದ್ದ ಆಕಾಶ್‌ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ‘ಬಿಡುಗಡೆ’ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಯಾವತಿ, ‘ಆಕಾಶ್‌ ಆನಂದ್‌ ಸಂಪೂರ್ಣ ರಾಜಕೀಯ ಪ್ರಬುದ್ಧತೆ ಪಡೆಯುವವರೆಗೆ ಪಕ್ಷದ ಪ್ರಮುಖ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಆದರೆ ಅವರ ತಂದೆ ಆನಂದಕುಮಾರ್‌ ಅವರು ಪ್ರಮುಖ ಹೊಣೆಗಾರಿಕೆ ಮುಂದುವರಿಸುತ್ತಾರೆ ಎಂದು ಮಾಯಾ ಸ್ಪಷ್ಟಪಡಿಸಿದ್ದಾರೆ.