ಸಾರಾಂಶ
ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿ ದೇಶದಿಂದ ಪರಾರಿಯಾಗಿದ್ದ ಬಹುಕೋಟಿ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿದೆ.
ಲಂಡನ್: ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿ ದೇಶದಿಂದ ಪರಾರಿಯಾಗಿದ್ದ ಬಹುಕೋಟಿ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಬ್ರಿಟನ್ ನ್ಯಾಯಾಲಯ ನಿರಾಕರಿಸಿದೆ.
ಈ ಕುರಿತು ನೀರವ್ ಕುಟುಂಬಸ್ಥರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ‘ನೀರವ್ ಮೋದಿ ಅವರ ಕೊನೆಯ ಜಾಮೀನು ಅರ್ಜಿ ವಿಚಾರಣೆ ನಡೆದು 3.5 ವರ್ಷಗಳಾಗಿವೆ. ಈಗ ಪರಿಸ್ಥಿತಿ ಬದಲಾಗಿರುವುದನ್ನು ಪರಿಗಣಿಸಿ ನೀರವ್‌ಗೆ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದ್ದರು. ಆದರೆ ನ್ಯಾಯಾಲಯಕ್ಕೆ ನೀರವ್ ಹಾಜರಾಗದಿರುವುದನ್ನು ಉಲ್ಲೇಖಿಸಿ, ಸಾಕ್ಷಿಗಳ ಮೇಲೆ ಅವರು ಗಣನೀಯ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.