2014ರ ಅಂಗಾಂಗ ಕಸಿ ನಿಯಮ ಶೀಘ್ರ ಜಾರಿಗೆ ಕರ್ನಾಟಕಕ್ಕೆ ಸುಪ್ರೀಂ ಸೂಚನೆ

| Published : Nov 20 2025, 12:00 AM IST

2014ರ ಅಂಗಾಂಗ ಕಸಿ ನಿಯಮ ಶೀಘ್ರ ಜಾರಿಗೆ ಕರ್ನಾಟಕಕ್ಕೆ ಸುಪ್ರೀಂ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ತಮಿಳುನಾಡು ಮತ್ತು ಮಣಿಪುರದಂಥ ರಾಜ್ಯಗಳು 2014ರ ಮಾನವ ಅಂಗಗಳು ಮತ್ತು ಅಂಗಾಂಶ ಕಸಿ ನಿಮಯವನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ನವದೆಹಲಿ: ಕರ್ನಾಟಕ ತಮಿಳುನಾಡು ಮತ್ತು ಮಣಿಪುರದಂಥ ರಾಜ್ಯಗಳು 2014ರ ಮಾನವ ಅಂಗಗಳು ಮತ್ತು ಅಂಗಾಂಶ ಕಸಿ ನಿಮಯವನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ಅಂಗಾಂಗ ದಾನಕ್ಕೆ ಸಂಬಂಧಿಸಿ ದೇಶಾದ್ಯಂತ ಏಕರೂಪದ ನಿಯಮ ಜಾರಿಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾ. ಕೆ.ವಿನೋದ್‌ ಚಂದ್ರನ್‌ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.

ಇದೇ ವೇಳೆ 1994ರ ಮಾನವ ಅಂಗಾಂಗ ಕಸಿ ಕಾಯ್ದೆಗೆ 2011ರಲ್ಲಿ ತಂದ ತಿದ್ದುಪಡಿಗಳನ್ನು ಆಂಧ್ರಪ್ರದೇಶವು ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರವು ನೋಡಿಕೊಳ್ಳಬೇಕು ಎಂದು ಇದೇ ವೇಳೆ ಸೂಚಿಸಿತು.

ಜತೆಗೆ ಮಣಿಪುರ, ನಾಗಾಲ್ಯಾಂಡ್‌ ಮತ್ತು ಅಂಡಮಾನ್‌ ನಿಕೋಬಾರ್‌ ಹಾಗೂ ಲಕ್ಷದ್ವೀಪಗಳು ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಎಸ್‌ಒಟಿಒ) ಹೊಂದಿಲ್ಲದಿರುವುದನ್ನು ಗಮನಿಸಿದ ನ್ಯಾಯಾಲಯವು, ರಾಜ್ಯಗಳ ಜತೆಗೆ ಸಮಾಲೋಚನೆ ನಡೆಸಿ ರಾಷ್ಟ್ರೀಯ ಅಂಗಾಂಗ ಕಸಿ ಯೋಜಯಡಿ ಎಸ್ಒಟಿಒದಂಥ ಸಂಸ್ಥೆಗಳನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು.

==

ಅಂಗಾಂಗ ದಾನ, ಕಸಿಗೆ ಏಕರೂಪದ ನೀತಿಗೆ ಆದೇಶ

- ಬಡವ, ಶ್ರೀಮಂತ ಭೇದವಿಲ್ಲದೇ ಎಲ್ಲರಿಗೂ ಸಿಗಬೇಕು

- ರಾಜ್ಯಗಳ ಜತೆ ಸಮಾಲೋಚಿಸಿ ನೀತಿ ರೂಪಿಸಿ

- ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಪಿಟಿಐ ನವದೆಹಲಿ

ಜಾತಿ, ಬಡವ-ಶ್ರೀಮಂತನೆನ್ನುವ ಭೇದವಿಲ್ಲದೆ ಅಗತ್ಯವಿರುವ ಎಲ್ಲಾ ರೋಗಿಗಳಿಗೂ ಅಂಗಾಂಗ ಕಸಿಯ ವಿಚಾರದಲ್ಲಿ ಸಮಾನ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಅಂಗಾಂಗ ದಾನ, ಕಸಿ ಕುರಿತು ದೇಶಾದ್ಯಂತ ಏಕರೂಪದ ನಿಯಮಗಳು ಮತ್ತು ನೀತಿ ರೂಪಿಸುವಂತೆ ಬುಧವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ಇಂಡಿಯನ್‌ ಸೊಸೈಟಿ ಆಫ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟೇಷನ್‌ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾ. ಕೆ.ವಿನೋದ್‌ ಚಂದ್ರನ್‌ ಅವರು ಅವರು, ಅಂಗಾಂಗ ದಾನ ಮತ್ತು ಹಂಚಿಕೆ ವಿಚಾರದಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿ ವ್ಯವಸ್ಥೆ ಅನುಷ್ಠಾನದ ನಿಟ್ಟಿನಲ್ಲಿ ಈ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರವು ಅಂಗಾಂಗ ಕಸಿ ವಿಚಾರದಲ್ಲಿ ‘ಮಾದರಿ ಹಂಚಿಕೆ’ ಮಾನದಂಡ ಇಟ್ಟುಕೊಂಡು ರಾಷ್ಟ್ರೀಯ ನೀತಿ ರಚಿಸಬೇಕು. ಈ ನೀತಿಯು ಲಿಂಗ ಮತ್ತು ಜಾತಿ ತಾರತಮ್ಯದಿಂದ ಮುಕ್ತವಾಗಿರಬೇಕು, ದಾನಿಗಳಿಗೆ ದೇಶಾದ್ಯಂತ ಏಕರೀತಿಯ ಮಾನದಂಡ ಜಾರಿಗೊಳಿಸಬೇಕು, ರಾಜ್ಯದಿಂದ ರಾಜ್ಯಕ್ಕೆ ಈ ವಿಚಾರದಲ್ಲಿರುವ ವ್ಯತ್ಯಾಸಗಳಿಗೆ ಕೊನೆ ಹಾಡಬೇಕು ಎಂದು ಹೇಳಿತು.ಇದೇ ವೇಳೆ ದಾನಿಗಳ ಶೋಷಣೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ದಾನಿಗಳ ಕಲ್ಯಾಣಕ್ಕಾಗಿಯೂ ಮಾರ್ಗಸೂಚಿಗಳನ್ನು ರಚಿಸಬೇಕು. ಈ ಮೂಲಕ ಅಂಗಾಂಗ ದಾನದ ನಂತರ ಅವರ ಆರೋಗ್ಯ ಕಾಳಜಿ ಹಾಗೂ ವಾಣಿಜ್ಯೀಕರಣ ಮತ್ತು ಶೋಷಣೆಯನ್ನು ತಪ್ಪಿಸಬೇಕು ಎಂದೂ ಸಲಹೆ ನೀಡಿದೆ.

+++++ರಾಷ್ಟ್ರೀಯ ಅಂಗಾಗ ಮತ್ತು ಅಂಗಾಂಶ ಕಸಿ ಸಂಸ್ಥೆ(ಎನ್‌ಒಟಿಟಿಒ) ಜತೆ ಸಮಾಲೋಚನೆ ನಡೆಸಿ ಜನನ ಮತ್ತು ಮರಣ ನೋಂದಣಿ ಫಾರಂ(ಫಾರಂ 4 ಮತ್ತು 4ಎ)ಗಳಿಗೆ ತರಬೇಕು. ಯಾವುದೇ ವ್ಯಕ್ತಿಯ ಸಾವು ಮೆದುಳು ನಿಷ್ಕ್ರಿಯ ಆಗಿದ್ದರೆ ಆ ಕುರಿತು ನಮೂದಿಸಲು ಹಾಗೂ ಅವರ ಕುಟುಂಬಕ್ಕೆ ಅಂಗಾಂಗ ದಾನದ ಆಯ್ಕೆ ನೀಡಲಾಗಿದೆಯೇ ಎಂಬ ಮಾಹಿತಿ ಉಲ್ಲೇಖಿಸಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.