ಸಾರಾಂಶ
ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ವ್ಯಕ್ತಿಗಳು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹೊಸದಿಲ್ಲಿ: 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಯನ್ನು ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವುದರಿಂದ ನಿಷೇಧಿಸುವ ರಾಜಸ್ಥಾನ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಸರ್ಕಾರ ಈ ಹಿಂದೆ ನಿಯಮ ಜಾರಿಗೆ ತಂದು 2 ಅಥವಾ ಅದಕ್ಕಿಂತ ಕಮ್ಮಿ ಮಕ್ಕಳ ಹೊಂದಿದವರು ಮಾತ್ರ ನೌಕರಿಗೆ ಅರ್ಜಿ ಸಲ್ಲಿಸಬಹುದು ಎಂದಿತ್ತು. ಆದರೆ ಖಾಸಗಿ ಕಂಪನಿಗಿಲ್ಲದ ಈ ನಿಯಮ ಸರ್ಕಾರಿ ನೌಕರಿಗೇಕೆ ಎಂದು ಕೆಲವರು ಅರ್ಜಿ ಸಲ್ಲಿಸಿದ್ದರು.