ಪಾಕ್ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರುವುದು ತಪ್ಪಲ್ಲ: ಸುಪ್ರೀಂಕೋರ್ಟ್‌

| Published : Mar 08 2024, 01:49 AM IST

ಸಾರಾಂಶ

ಪಾಕಿಸ್ತಾನ ಸ್ವತಂತ್ರ ದಿನಾಚರಣೆಗೆ ಶುಭಾಶಯ ಕೋರಿದ್ದ ಕೊಲ್ಹಾಪುರದ ಕಾಶ್ಮೀರಿ ಪ್ರೊಫೆಸರ್‌ ವಿರುದ್ಧದ ಕೇಸು ರದ್ದು ಮಾಡಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದೆ.

ನವದೆಹಲಿ: ಪಾಕ್‌ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರುವುದು ತಪ್ಪಲ್ಲ ಹಾಗೂ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿಯನ್ನು ಕರಾಳ ದಿನ ಎಂದು ಕರೆದಿದ್ದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.ಮಹಾರಾಷ್ಟ್ರದ ಕೊಲ್ಲಾಪುರದ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಮುಸ್ಲಿಂ ಪ್ರೊಫೆಸರ್ ಜಾವೇದ್ ಅಹ್ಮದ್ ಹಾಜಂ ‘ಆಗಸ್ಟ್ 5-ಜಮ್ಮು ಮತ್ತು ಕಾಶ್ಮೀರಕ್ಕೆ ಕಪ್ಪು ದಿನ’ ಎಂಬ ವಾಟ್ಸಾಪ್ ಸ್ಟೇಟಸ್ ಅನ್ನು ಗ್ರೂಪ್‌ನಲ್ಲಿ ಹಾಕಿದ್ದರು ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದರು. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು.ಇದನ್ನು ರದ್ದುಗೊಳಿಸಿದ ಪೀಠ, ಪಾಕ್‌ ಸ್ವಾತಂತ್ರ್ಯ ದಿನಕ್ಕೆ ಶುಭ ಕೋರುವುದು ಸದ್ಭಾವನೆ ಸಂಕೇತ. ಅಲ್ಲದೆ, 370ನೇ ವಿಧ ರದ್ದತಿಯನ್ನು ಅವರು ವಿರೋಧಿಸಿದ್ದು ಪ್ರತಿಭಟನೆ ಮತ್ತು ದುಃಖದ ಅಭಿವ್ಯಕ್ತಿಯಾಗಿದೆ ಎಂದು ಹೇಳಿದೆ.