ಜಡ್ಜ್‌ ನೇಮಕ ವಿಳಂಬ: ಇಂದು ಸುಪ್ರೀಂನಲ್ಲಿ ವಿಚಾರಣೆ

| Published : Nov 19 2023, 01:30 AM IST

ಜಡ್ಜ್‌ ನೇಮಕ ವಿಳಂಬ: ಇಂದು ಸುಪ್ರೀಂನಲ್ಲಿ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅನುಮೋದಿಸುವಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ವಿಳಂಬವಾಗಿದೆ ಎಂಬ ಆರೋಪ ಸೇರಿದಂತೆ 2 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

ಕೇಂದ್ರ ಪಕ್ಷಪಾತ ಧೋರಣೆ ತಾಳುತ್ತಿದೆ ಎಂದಿದ್ದ ಪೀಠಪಿಟಿಐ ನವದೆಹಲಿ

ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅನುಮೋದಿಸುವಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ವಿಳಂಬವಾಗಿದೆ ಎಂಬ ಆರೋಪ ಸೇರಿದಂತೆ 2 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ವಿಚಾರಣೆ ಮಾಡಲಿದೆ.ನ.7 ರಂದು ಅರ್ಜಿಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ಉನ್ನತ ನ್ಯಾಯಾಂಗಕ್ಕೆ ನೇಮಕ ಮಾಡಲು ಕೊಲಿಜಿಯಂ ಮಾಡಿದ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆ ತಾಳುತ್ತಿದೆ. ಬೇಕಾದವರನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದವರ ಬಗ್ಗೆ ನಿರ್ಣಯ ಕೈಗೊಳ್ಳಲು ವಿಳಂಬ ಮಾಡುತ್ತಿದೆ. ಇದರಿಂದ ನ್ಯಾಯಾಂಗದ ಕರ್ತವ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಇದಲ್ಲದೆ ವರ್ಗಾವಣೆ ಶಿಫಾರಸುಗಳ ಬಗ್ಗೆಯೂ ಕೇಂದ್ರ ವಿಳಂಬ ಮಾಡುತ್ತಿದೆ ಎಂದು ಕಿಡಿಕಾರಿತ್ತು.

ಒಟ್ಟಾರೆ 14 ಶಿಫಾರಸುಗಳು ಇನ್ನೂ ಅಂಗೀಕಾರಕ್ಕೆ ಕಾಯುತ್ತಿವೆ. 2ನೇ ಬಾರಿ ಶಿಫಾರಸಾದ ಐವರು ನ್ಯಾಯಾಧೀಶರ ನೇಮಕಕ್ಕೂ ಕೇಂದ್ರ ಮೀನ ಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.ನ್ಯಾಯಾಧೀಶರ ನೇಮಕ ವಿಳಂಬಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ ಅರ್ಜಿ ಸೇರಿ 2 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಹಲವಾರು ತಿಂಗಳಿಂದ ಈ ಬಗ್ಗೆ ಕೇಂದ್ರ-ಸುಪ್ರೀಂ ಕೋರ್ಟ್‌ ಸಂಘರ್ಷ ನಡೆಯುತ್ತಿದೆ.