ಸಾರಾಂಶ
ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್‌ನಲ್ಲಿರುವ ಕಿರಣ್ ಜೆಮ್ಸ್ ಕಂಪನಿ, ತನ್ನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ 50 ಸಾವಿರ ಉದ್ಯೋಗಿಗಳಿಗೆ 10 ದಿನಗಳ ಕಾಲ ರಜೆ ಘೋಷಿಸಿದೆ.
ಸೂರತ್: ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್‌ನಲ್ಲಿರುವ ಕಿರಣ್ ಜೆಮ್ಸ್ ಕಂಪನಿ, ತನ್ನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ 50 ಸಾವಿರ ಉದ್ಯೋಗಿಗಳಿಗೆ 10 ದಿನಗಳ ಕಾಲ ರಜೆ ಘೋಷಿಸಿದೆ. ವಜ್ರೋದ್ಯಮಕ್ಕೆ ಬೇಡಿಕೆ ಇಳಿಕೆಯಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.ಅತಿದೊಡ್ಡ ಪಾಲಿಶ್ ಮಾಡಿದ ವಜ್ರ ರಫ್ತು ಮಾಡುವ ಕಂಪೆನಿಯಾಗಿರುವ ಕಂಪೆನಿ ಕಿರಣ್ ಜೆಮ್ಸ್ ಆ.17 ರಿಂದ ಆ.27ರವರೆಗೆ ಉದ್ಯೋಗಿಗಳಿಗೆ ರಜೆ ಘೋಷಿಸಿದೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪೆನಿ ಅಧ್ಯಕ್ಷ ವಲ್ಲಭಾಯಿ ಲಖಾನಿ ‘ಪ್ರಸ್ತುತ ವಜ್ರೋದ್ಯಮ ಸಂಸ್ಥೆಯು ಕೆಟ್ಟ ಪರಿಸ್ಥಿತಿಯಲ್ಲಿದೆ. ವಜ್ರೋದ್ಯಮಕ್ಕೆ ಹೆಚ್ಚಿನ ಬೇಡಿಕೆಯಿಲ್ಲ. ಹೀಗಾಗಿ ವಜ್ರಗಳ ಉತ್ಪಾದನೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಇದು ಕಂಪೆನಿ ಇತಿಹಾಸದಲ್ಲಿ ಮೊದಲ ಸಲ’ಎಂದಿದ್ದಾರೆ. ಕಂಪನಿ ವಾರ್ಷಿಕ 17000 ಕೋಟಿ ರು. ಮೊತ್ತದ ವಹಿವಾಟು ನಡೆಸುತ್ತದೆ.