ಸಾರಾಂಶ
ವಯನಾಡು: ಕೇರಳದ ವಯನಾಡಿನಲ್ಲಿ ಘನಘೋರ ದುರಂತ ಸಂಭವಿಸಿ 13 ದಿನಗಳೇ ಕಳೆದಿವೆ. ದುರಂತದ ಬಳಿಕ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಮೊದಲ ಸಲ ರಕ್ಷಣಾ ತಂಡದ ಜೊತೆಗೆ ತಮ್ಮ ಊರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಾಮಾವಶೇಷಗೊಂಡಿರುವ ಊರು, ಕುಸಿದು ಬಿದ್ದಿರುವ ಮನೆಗಳನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ದುರಂತದಲ್ಲಿ ಮನೆ ಸೇರಿದಂತೆ ಎಲ್ಲವೂ ನಾಮಾವಶೇಷವಾಗಿದ್ದು, ಊರಿನ ಚಿತ್ರಣವೇ ಬದಲಾಗಿದೆ. ಕೆಸರಿನಲ್ಲಿ ಹೂತು ಹೋಗಿರುವ, ಅವಶೇಷಗೊಂಡಿರುವ ಮನೆಗಳನ್ನು ಕಂಡು ಸಂತ್ರಸ್ತರು ಭಾವುಕರಾಗಿದ್ದಾರೆ. ‘ಭೂಕುಸಿತ ದುರಂತದ ಬಳಿಕ ಮೊದಲ ಸಲ ಇಲ್ಲಿಗೆ ಬಂದಿದ್ದೇವೆ. ಮುಂಚೆ ಇಲ್ಲಿ ಹಲವಾರು ಮನೆಗಳಿದ್ದವು. ಆದರೆ ಇದೀಗ ಏನೂ ಉಳಿದಿಲ್ಲ’ ಎಂದು ಮನೆ ಕಳೆದುಕೊಂಡ ಥಂಕಚನ್ ಬೇಸರ ವ್ಯಕ್ತ ಪಡಿಸಿದ್ದಾರೆ.
‘ಇದೀಗ ನಮಗೆ ಏನೂ ಸಿಕ್ಕಿಲ್ಲ. ಎಲ್ಲವೂ ಕೊಚ್ಚಿ ಹೋಗಿದೆ ಅಥವಾ ಬಂಡೆಗಳ ಅಡಿಯಲ್ಲಿ ಹೂತು ಹೋಗಿದೆ’ ಎಂದು ಮತ್ತೊರ್ವ ಸಂತ್ರಸ್ತ ಮಹಿನ್ ಹೇಳಿದ್ದಾರೆ. ಹೀಗೆ ಭೂಕುಸಿತ ಜಾಗಕ್ಕೆ ಬಂದು ತಮ್ಮ ಮನೆಗಳನ್ನು ಹುಡುಕಿದವರಿಗೆ ಸಿಕ್ಕಿರುವುದು ಮನೆಯ ಅವಶೇಷಗಳಷ್ಟೇ.ಇನ್ನು ವಯನಾಡಿನಲ್ಲಿ ನಾಪತ್ತೆಯಾಗಿರುವವರ ಪತ್ತೆ ಕಾರ್ಯ ಮುಂದುವರೆದಿದ್ದು, ಶುಕ್ರವಾರದಿಂದ ಸ್ಥಗಿತಗೊಂಡಿದ್ದ ಶೋಧ ಕಾರ್ಯ ಭಾನುವಾರ ಪುನಾರಂಭವಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))