ಸಾರಾಂಶ
ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಅಬ್ದುಲ್ ರೆಹಮಾನ್‌ಗೆ, ಫರೀದಾಬಾದ್‌ನಲ್ಲಿ ಸ್ಲೀಪರ್‌ಸೆಲ್‌ಗಳ ಬೆಂಬಲ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಆಯಾಮದಲ್ಲೂ ತನಿಖೆ ನಡೆಸಿವೆ.
ಫರಿದಾಬಾದ್: ಅಯೋಧ್ಯೆ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಅಬ್ದುಲ್ ರೆಹಮಾನ್‌ಗೆ, ಫರೀದಾಬಾದ್‌ನಲ್ಲಿ ಸ್ಲೀಪರ್‌ಸೆಲ್‌ಗಳ ಬೆಂಬಲ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಆಯಾಮದಲ್ಲೂ ತನಿಖೆ ನಡೆಸಿವೆ.
ಈ ನಡುವೆ ತನಿಖೆ ವೇಳೆ, ಹರ್ಯಾಣದಲ್ಲಿ ತನಗೆ ಗ್ರೆನೇಡ್ ನೀಡಿದ ವ್ಯಕ್ತಿ ಯಾರು? ಆತನ ಹೆಸರು ಏನು? ಎಂಬ ಮಾಹಿತಿ ಇಲ್ಲ ಎಂದು ಅಬ್ದುಲ್ ಹೇಳಿದ್ದಾನೆ. ಉತ್ತರಪ್ರದೇಶದ ಫೈಜಾಬಾದ್ ಮೂಲದ ಅಬ್ದುಲ್, ಭಾನುವಾರ ಫರೀದಾಬಾದ್‌ನಲ್ಲಿ ವ್ಯಕ್ತಿಯೊಬ್ಬನಿಂದ ಗ್ರೆನೇಡ್ ಪಡೆದು ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.ಆತನಿಗೆ ಐಸಿಸ್ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಂಟಿರುವ ಅನುಮಾನ ಇದೆ.