ಅರವಿಂದ್‌ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ಗೆ ಜಾಮೀನು ನೀಡಿದಲ್ಲಿ ತಮಗೆ ಪ್ರಾಣ ಅಪಾಯ ಇರುವುದಾಗಿ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ನವದೆಹಲಿ: ಹಲ್ಲೆ ಪ್ರಕರಣದಲ್ಲಿ ಬಂಧಿತ, ದೆಹಲಿ ಸಿಎಂ ಕೇಜ್ರಿವಾಲ್‌ ಅವರ ಆಪ್ತ ಬಿಭವ್‌ ಕುಮಾರ್‌ ಅವರಿಗೆ ಜಾಮೀನು ನೀಡಿದರೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಸೋಮವಾರ ಕೋರ್ಟ್‌ ವಿಚಾರಣೆ ವೇಳೆ ಕಣ್ಣೀರಿಟ್ಟ ಘಟನೆ ನಡೆದಿದೆ.

ಬಿಭವ್‌ ಜಾಮೀನು ಅರ್ಜಿ ವಿಚಾರಣೆ ವೇಳೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ವಾತಿ, ಇತ್ತೀಚೆಗೆ ಸಿಎಂ ಮನೆಗೆ ತೆರಳಿದ್ದ ವೇಳೆ ನನ್ನನ್ನು ಥಳಿಸಲಾಗಿದೆ.

ಅದಾದ ಬಳಿಕ ಆಪ್ ನಾಯಕರು ನನ್ನನ್ನು ಬಿಜೆಪಿ ಏಜೆಂಟ್ ಎಂದು ಹೇಳುತ್ತಿದ್ದಾರೆ.

ಅವರು (ಆಪ್) ಟ್ರೋಲರ್‌ಗಳ ಸೈನ್ಯವನ್ನು ಹೊಂದಿದ್ದಾರೆ. ಇಡೀ ಪಕ್ಷದ ಯಂತ್ರವನ್ನು ಅದಕ್ಕಂತಲೇ ನಿಯೋಜಿಸಲಾಗಿದೆ.

ನನ್ನ ವಿರುದ್ಧ ನಿರಂತರ ಪತ್ರಿಕಾಗೋಷ್ಠಿಗಳು ನಡೆದವು. ಈ ವ್ಯಕ್ತಿ (ಬಿಭವ್) ಸಾಮಾನ್ಯನಲ್ಲ.

ಅವನು ಹೊರಗಡೆ ಬಂದರೆ ನನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಸ್ವಾತಿ ಕೋರ್ಟ್‌ನಲ್ಲಿ ಹೇಳಿದರು.