ಸಾರಾಂಶ
ಕೇಂದ್ರದಲ್ಲಿನ ಅಧಿಕಾರರೂಢ ಸರ್ಕಾರಗಳು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿವೆ ಎಂದು ದಶಕಗಳಿಂದಲೂ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿಕೊಂಡೇ ಬಂದಿರುವ ತಮಿಳುನಾಡಿನ ಡಿಎಂಕೆ ಸರ್ಕಾರ ರಾಜ್ಯದಲ್ಲಿ ‘ಹಿಂದಿ’ಯನ್ನೇ ನಿಷೇಧಿಸುವಂಥ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗಿದೆ.
ಚೆನ್ನೈ: ಕೇಂದ್ರದಲ್ಲಿನ ಅಧಿಕಾರರೂಢ ಸರ್ಕಾರಗಳು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿವೆ ಎಂದು ದಶಕಗಳಿಂದಲೂ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿಕೊಂಡೇ ಬಂದಿರುವ ತಮಿಳುನಾಡಿನ ಡಿಎಂಕೆ ಸರ್ಕಾರ ರಾಜ್ಯದಲ್ಲಿ ‘ಹಿಂದಿ’ಯನ್ನೇ ನಿಷೇಧಿಸುವಂಥ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗಿದೆ. ಇಂಥದ್ದೊಂದು ನಿಷೇಧ ಕುರಿತ ಮಸೂದೆ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗಬೇಕಿತ್ತಾದರೂ ಅಂತಿಮ ಹಂತದಲ್ಲಿ ಸರ್ಕಾರ ಆ ನಿರ್ಧಾರ ಮುಂದೂಡಿದೆ.
ರಾಜ್ಯಾದ್ಯಂತ ಹಿಂದಿ ಸಿನಿಮಾ, ಹಾಡು, ಬೋರ್ಡ್‌ಗಳನ್ನು ನಿಷೇಧಿಸುವ ಸಂಬಂಧ ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರ ರಹಸ್ಯವಾಗಿ ಮಸೂದೆಯೊಂದನ್ನು ಸಿದ್ಧಪಡಿಸಿತ್ತು. ಪೂರ್ವ ನಿರ್ಧಾರದ ಅನ್ವಯ, ಅದನ್ನು ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಮಂಡಿಸಲು ಸಿದ್ಧತೆ ಕೂಡಾ ನಡೆಸಿತ್ತು. ಆದರೆ ಈ ಪ್ರಸ್ತಾಪಕ್ಕೆ ಸ್ಥಳೀಯವಾಗಿ ಕೆಲ ಪಕ್ಷಗಳ ವಿರೋಧ ಮತ್ತು ಇಂಥ ನಿರ್ಧಾರ ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಊಹಿಡಿ, ಕಡೇ ಕ್ಷಣದಲ್ಲಿ ಮಸೂದೆ ಮಂಡನೆ ಕೈಬಿಡಲಾಗಿದೆ ಎನ್ನಲಾಗಿದೆ.
ಸಲಾಗಿತ್ತು. ಇದನ್ನು ಬುಧವಾರ ಸದನದಲ್ಲಿ ಮಂಡಿಸಲೂ ನಿಶ್ಚಿಯಿಸಲಾಗಿತ್ತು. ಆದರೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ನಡೆದ ಸಭೆಯ ಬಳಿಕ ಅದರ ಮಂಡನೆಯನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ. ಈ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿಲ್ಲ ಎಂದು ತಜ್ಞರು ಹೇಳಿದ ಹೊರತಾಗಿಯೂ ಮಂಡಿಸದೇ ಇರುವುದು ಕುತೂಹಲ ಮೂಡಿಸಿದೆ.
ತಮಿಳುನಾಡಲ್ಲಿ ಹಿಂದಿ ವಿರೋಧಿ ಕ್ರಮಗಳು ಹೊಸತಲ್ಲ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಿಂದಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳುವ ಯೋಜನೆ 1967ರಲ್ಲೇ ಸಿಎಂ ಅಣ್ಣಾದೊರೈ ಸರ್ಕಾರ ರೂಪಿಸಿತ್ತು. ಅದು ಈ ವರ್ಷದ ಆ.8ರಂದು ರಾಜ್ಯ ಶಿಕ್ಷಣ ನೀತಿಯಡಿ ಜಾರಿಗೆ ಬಂದಿದೆ. ಇದರ ಮುಂದುವರೆದ ಭಾಗವಾಗಿ ಹೊಸ ಹಿಂದಿ ವಿರೋಧಿ ಮಸೂದೆಯನ್ನು ರೂಪಿಸಲಾಗಿದೆ.
ಬಿಜೆಪಿ ಟೀಕೆ:
‘ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು’ ಎಂದಿರುವ ಬಿಜೆಪಿಯ ವಿನೋಜ್ ಸೆಲ್ವಂ, ಸರ್ಕಾರದ ಈ ನಡೆಯನ್ನು ಟೀಕಿಸುತ್ತಾ, ‘ಕರೂರು ಕಾಲ್ತುಳಿತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆ ಆಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹೀಗೆ ಮಾಡುತ್ತಿದೆ’ ಎಂದಿದ್ದಾರೆ.