ದೇವಸ್ಥಾನದ ಹುಂಡಿಗೆ ಆಕಸ್ಮಿಕ ಬಿದ್ದ ಐಫೋನ್‌ ವಾಪಸ್‌ಗೆ ತಮಿಳುನಾಡಿನ ದೇಗುಲ ನಕಾರ

| Published : Dec 22 2024, 01:31 AM IST / Updated: Dec 22 2024, 04:44 AM IST

Apple I Phone

ಸಾರಾಂಶ

ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಐಫೋನ್‌ ಆಕಸ್ಮಿಕವಾಗಿ ಬಿದ್ದಿದೆ. ಆದರೆ ದೇಗುಲದ ಆಡಳಿತ ಮಂಡಳಿಯವರು, ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಹೇಳಿ ಐಫೋನ್‌ ವಾಪಸ್‌ ನೀಡಲು ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಐಫೋನ್‌ ಆಕಸ್ಮಿಕವಾಗಿ ಬಿದ್ದಿದೆ. ಆದರೆ ದೇಗುಲದ ಆಡಳಿತ ಮಂಡಳಿಯವರು, ಹುಂಡಿಗೆ ಬಿದ್ದ ಬಳಿಕ ಅದು ದೇಗುಲದ ಆಸ್ತಿ ಎಂದು ಹೇಳಿ ಐಫೋನ್‌ ವಾಪಸ್‌ ನೀಡಲು ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಲ್ಲಿನ ವಿನಾಯಕಪುರಂ ನಿವಾಸಿ ದಿನೇಶ್‌ ಚೆನ್ನೈನ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ಬಳಿಯ ದೇಗುಲಕ್ಕೆ ಕಳೆದ ತಿಂಗಳು ಬಂದಿದ್ದರು. ಹುಂಡಿಗೆ ಹಣ ಹಾಕುವ ಸಂದರ್ಭದಲ್ಲಿ ಆಕಸ್ಮಿಕ ಐಫೋನ್‌ ಕೂಡ ಹುಂಡಿಗೆ ಬಿದ್ದಿದ್ದೆ. ದೇವಸ್ಥಾನ ದವರ ಬಳಿ ಕೇಳಿದಾಗ ಹುಂಡಿಗೆ ಹಾಕಿದ ಮೇಲೆ ಮರಳಿಸುವುದಿಲ್ಲ ಎಂದಿದ್ದಾರೆ. ಆದರೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಶುಕ್ರವಾರ ಹುಂಡಿ ಓಪನ್ ಮಾಡಿಸಿದ್ದಾರೆ. ಈ ವೇಳೆ ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದವರು ಮೊಬೈಲ್‌ನಲ್ಲಿರುವ ಡೇಟಾವನ್ನು ಕೊಡುತ್ತೇವೆ, ಐಫೋನ್ ನೀಡುವುದಿಲ್ಲ ಎಂದಿದ್ದಾರೆ.

ಆದರೆ ಐಫೋನ್ ಬೇಕು ಅಂದಿರುವ ದಿನೇಶ್‌, ಡೇಟಾ ಮಾತ್ರ ಸ್ವೀಕಾರ ಮಾಡಲು ನಿರಾಕರಿಸಿ, ಬರಿಗೈಯಲ್ಲಿ ವಾಪಾಸ್‌ ಹೋಗಿರುವ ಘಟನೆ ನಡೆದಿದೆ.