2 ಸಾವಿರ ಕೋಟಿ ರು. ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌ ತಮಿಳು ನಿರ್ಮಾಪಕ!

| Published : Feb 26 2024, 01:32 AM IST

ಸಾರಾಂಶ

ದಿಲ್ಲಿಯಲ್ಲಿ ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದ್ದು, 2 ಸಾವಿರ ಕೋಟಿ ರು. ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌ ತಮಿಳುನಾಡು ಮೂಲದ ನಿರ್ಮಾಪಕ ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

ನವದೆಹಲಿ: ‘ಭಾರತದಿಂದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಅಕ್ರಮ ಕಳ್ಳಸಾಗಣೆ ಮಾಡುತ್ತಿದ್ದ ಬರೋಬ್ಬರಿ 2 ಸಾವಿರ ಕೋಟಿ ರು. ಮೌಲ್ಯದ ಮೆಥಾಂಫೆಟಾಮೈನ್‌ ಡ್ರಗ್ಸ್‌ ದಂಧೆಯ ಕಿಂಗ್‌ಪಿನ್‌ ಒಬ್ಬ ತಮಿಳು ನಿರ್ಮಾಪಕ’ ಎಂದು ಬಂಧಿತ ಆರೋಪಿಗಳು ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.

ತಮಿಳು ನಿರ್ಮಾಪಕ ಸದ್ಯ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಮೆಥಾಂಫೆಟಾಮೈನ್‌ ಡ್ರಗ್‌ ಮಾಡಲು ಬಳಸುವ ಸ್ಯೂಡೋಫೆಡ್ರೈನ್‌ ರಾಸಾಯನಿಕವನ್ನು ಪ್ಯಾಕ್‌ ಮಾಡುತ್ತಿದ್ದ ವೇಳೆ ಫೆ.15ರಂದು ಮೂವರು ಆರೋಪಿಗಳನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದರು. ಇವರು ಇಡೀ ದಂಧೆಯ ಜಾಲವನ್ನು ಪೊಲೀಸರಿಗೆ ತಿಳಿಸಿದ್ದು, ಅದರಂತೆ ವಿಮಾನ ಮತ್ತು ಹಡಗಿನ ಮೂಲಕ ವಿದೇಶಗಳಿಗೆ ಆಹಾರದ ಪೌಡರ್‌ ಪೊಟ್ಟಣಗಳಲ್ಲಿ ಹಾಗೂ ಒಣಗಿದ ತೆಂಗಿನಕಾಯಿಗಳಲ್ಲಿ ಇವುಗಳನ್ನು ಬೆರೆಸಿ ಸಾಗಿಸಲಾಗುತ್ತಿತ್ತು ಎಂಬ ಸ್ಫೋಟಕ ಸತ್ಯವನ್ನು ಬಾಯಿಬಿಟ್ಟಿದ್ದಾರೆ.