ಸಾರಾಂಶ
ಟಾಟಾ ಸಂಸ್ಥೆಯು ವಾಣಿಜ್ಯ ವಾಹನಗಳ ಬೆಲೆಯನ್ನು ಏಪ್ರಿಲ್‌ನಿಂದ ಶೇ.2ರಷ್ಟು ಹೆಚ್ಚಳವಾಗಲಿದೆ. ಇದು ಟಾಟಾ ಸಂಸ್ಥೆ 2024ರಲ್ಲಿ ಮಾಡುತ್ತಿರುವ ಎರಡನೇ ಬೆಲೆ ಹೆಚ್ಚಳವಾಗಿದೆ.
ನವದೆಹಲಿ: ಭಾರತದಲ್ಲಿ ಗುಣಮಟ್ಟದ ವಾಹನ ತಯಾರಿಕೆಯಲ್ಲಿ ಪ್ರಸಿದ್ಧಿ ಗಳಿಸಿದ ಟಾಟಾ ಮೋಟರ್ಸ್ ಸಂಸ್ಥೆ ತನ್ನ ವಾಣಿಜ್ಯ ವಾಹನಗಳ (ಸಿವಿ) ಬೆಲೆಗಳನ್ನು ಹೆಚ್ಚಿಸಲಿದೆ.
ಏಪ್ರಿಲ್ ಮಾಹೆಯಿಂದ ಶೇ.2ರಷ್ಟು ವಾಹನಗಳ ಬೆಲೆ ಏರಿಕೆಯಾಗಲಿದೆ.2024ರಲ್ಲಿ ಟಾಟಾ ಮೋಟರ್ಸ್ ಎರಡನೇ ಬಾರಿ ತನ್ನ ವಾಣಿಜ್ಯ ವಾಹನಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದೆ.
ಇದೇ ವರ್ಷ ಜನವರಿ ಒಂದರನ್ನು ವಾಣಿಜ್ಯ ವಾಹನಗಳ ಮೇಲೆ ಶೇಕಡ 3ರಷ್ಟು ಹಾಗೂ ಪ್ರಯಾಣಿಕರ ವಾಹನಗಳ ಮೇಲೆ ಶೇಕಡ 0.7ರಷ್ಟು ದರವನ್ನು ಏರಿಕೆ ಮಾಡಲಾಗಿತ್ತು.