ಮಾರುತಿ ಕಾರು ಹಿಂದಿಕ್ಕಿ ಟಾಟಾ ‘ಪಂಚ್’ 4 ದಶಕಗಳಲ್ಲಿ ಮೊದಲ ಬಾರಿಗೆ ಭಾರತದ ಕಾರು ಮಾರಾಟದಲ್ಲಿ ಅಗ್ರಸ್ಥಾನ

| Published : Jan 07 2025, 12:15 AM IST / Updated: Jan 07 2025, 04:24 AM IST

ಸಾರಾಂಶ

 ಟಾಟಾ ಮೋಟಾರ್ಸ್‌ ಮೊದಲ ಬಾರಿ ಮಾರುತಿ ಸುಜುಕಿಯನ್ನು ಹಿಂದಿಕ್ಕಿ 4 ದಶಕಗಳಲ್ಲಿ ಮೊದಲ ಬಾರಿಗೆ ಭಾರತದ ಕಾರು ಮಾರಾಟದಲ್ಲಿ ಅಗ್ರಸ್ಥಾನ ಪಡೆದಿದೆ ಹಾಗೂ ಐತಿಹಾಸಿಕ ಸಾಧನೆಯನ್ನು ಮಾಡಿದೆ.

ಮುಂಬೈ: ಟಾಟಾ ಮೋಟಾರ್ಸ್‌ ಮೊದಲ ಬಾರಿ ಮಾರುತಿ ಸುಜುಕಿಯನ್ನು ಹಿಂದಿಕ್ಕಿ 4 ದಶಕಗಳಲ್ಲಿ ಮೊದಲ ಬಾರಿಗೆ ಭಾರತದ ಕಾರು ಮಾರಾಟದಲ್ಲಿ ಅಗ್ರಸ್ಥಾನ ಪಡೆದಿದೆ ಹಾಗೂ ಐತಿಹಾಸಿಕ ಸಾಧನೆಯನ್ನು ಮಾಡಿದೆ.

ಆಟೋಕಾರ್ ಪ್ರೊ ವರದಿಯ ಪ್ರಕಾರ , ಭಾರತೀಯ ವಾಹನ ತಯಾರಕರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿದೆ. 

 2024ರಲ್ಲಿ ವ್ಯಾಗನ್ ಆರ್‌ನ 1,91,000 ಕಾರು ಮಾರಾಟ ಆಗಿವೆ. ಆದರೆ ಟಾಟಾ ಎಸ್‌ಯುವಿ ಪಂಚ್‌ 202,000 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.

ದೇಶದಲ್ಲಿ ಮಾರಾಟವಾಗುವ ಅಗ್ರ ಐದು ಕಾರುಗಳಲ್ಲಿ 3 ಎಸ್‌ಯುವಿಗಳಾಗಿವೆ. 2023 ರಲ್ಲಿ ಮುಂಚೂಣಿಯಲ್ಲಿದ್ದ ಮಾರುತಿ ಸುಜುಕಿಯ ಎರ್ಟಿಗಾ 2024 ರಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪ್ರೀಮಿಯಂ ವಾಹನಗಳು ಮತ್ತು ಎಸ್‌ಯುವಿಗಳ ಕಡೆಗೆ ಗ್ರಾಹಕರ ಆದ್ಯತೆಯ ಬದಲಾವಣೆಯು, ವಿಶೇಷವಾಗಿ ₹ 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ, ಮಾರುತಿ ಸುಜುಕಿ ಕಾರಿನ ಮೇಲೆ ಒತ್ತಡವನ್ನು ಉಂಟುಮಾಡಿದೆ ಎಂದು ವರದಿ ಹೇಳಿದೆ.

ಮಾರುತಿ ಸುಜುಕಿ, 2018 ರಲ್ಲಿ 52 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿತ್ತು. ಈಗ ಅದರ ಪಾಲು ಶೇ.41ಕ್ಕೆ ಕುಸಿದಿದೆ.