ಸಾರಾಂಶ
ಟಿಡಿಪಿ ಸಭೆ ಸೇರಿ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಟಿಡಿಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಿದೆ.
ಅಮರಾವತಿ: ಸಭೆಯ ಬಳಿಕ ಟಿಡಿಪಿ, ಜನಸೇನಾ ಹಾಗೂ ಬಿಜೆಪಿಯನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟ ರಾಜಭವನಕ್ಕೆ ತೆರಳಿ ರಾಜ್ಯಪಾಲ ಅಬ್ದುಲ್ ನಜೀ಼ರ್‌ರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.
ಮೂಲಗಳ ಪ್ರಕಾರ ಮಂಗಳವಾರ ರಾತ್ರಿಯೇ ಸಂಪುಟವನ್ನು ಅಂತಿಮಗೊಳಿಸಲಿದ್ದು, ಬುಧವಾರ ಬೆಳಗ್ಗೆ 11:27ಕ್ಕೆ ಚಂದ್ರಬಾಬು ನಾಯ್ಡು ನಗರದ ಗನ್ನಾವರಂ ವಿಮಾನ ನಿಲ್ದಾಣ ಬಳಿಯ ಕೇಸರಪಳ್ಳಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಆಂಧ್ರಪ್ರದೇಶದ 175 ಕ್ಷೇತ್ರಗಳ ವಿಧಾನಸಭೆಯಲ್ಲಿ ಟಿಡಿಪಿ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಮೈತ್ರಿಕೂಟ 164 ಕ್ಷೇತ್ರಗಳಲ್ಲಿ ಜಯ ಕಂಡಿದೆ.