ಮೊದಲ ಖಾಸಗಿ ಪಿಎಸ್‌ಎಲ್‌ವಿ ರಾಕೆಟ್‌ ವರ್ಷಾಂತ್ಯಕ್ಕೆ ಉಡ್ಡಯನ

| Published : Feb 19 2025, 12:46 AM IST

ಮೊದಲ ಖಾಸಗಿ ಪಿಎಸ್‌ಎಲ್‌ವಿ ರಾಕೆಟ್‌ ವರ್ಷಾಂತ್ಯಕ್ಕೆ ಉಡ್ಡಯನ
Share this Article
  • FB
  • TW
  • Linkdin
  • Email

ಸಾರಾಂಶ

ಇದುವರೆಗೂ ಕೇವಲ ಇಸ್ರೋ ನಿರ್ಮಿಸುತ್ತಿದ್ದ ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದು, ಅದು ವರ್ಷಾಂತ್ಯಕ್ಕೆ ಉಪಗ್ರಹ ಹೊತ್ತು ಆಗಸಕ್ಕೆ ನೆಗೆಯುವ ನಿರೀಕ್ಷೆ ಇದೆ.

ನವದೆಹಲಿ: ಇದುವರೆಗೂ ಕೇವಲ ಇಸ್ರೋ ನಿರ್ಮಿಸುತ್ತಿದ್ದ ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದ್ದು, ಅದು ವರ್ಷಾಂತ್ಯಕ್ಕೆ ಉಪಗ್ರಹ ಹೊತ್ತು ಆಗಸಕ್ಕೆ ನೆಗೆಯುವ ನಿರೀಕ್ಷೆ ಇದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಮತ್ತು ಇತರೆ ಸಂಸ್ಥೆಗಳ ಪಾಲುದಾರಿಕೆಯ ಭಾಗವಾಗಿ ಇಸ್ರೋ ತನ್ನ ಪಿಎಸ್‌ಎಲ್‌ವಿ ರಾಕೆಟ್‌ ತಂತ್ರಜ್ಞಾನವನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಮತ್ತು ಖಾಸಗಿ ವಲಯದ ಎಲ್‌ ಆ್ಯಂಡ್‌ ಟಿಗೆ ನೀಡಿದೆ. ಉಪಗ್ರಹ ಈಗಾಗಲೇ ನಿರ್ಮಾಣ ಹಂತದಲ್ಲಿ ಪ್ರಸಕ್ತ ವರ್ಷದ 3ನೇ ತ್ರೈಮಾಸಿಕದ ವೇಳೆಗೆ ಟಿಡಿಎಸ್‌ 1 ಉಪಗ್ರಹ ಹೊತ್ತು ಆಗಸಕ್ಕೆ ನೆಗೆಯಲಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣನ್‌ ಮಾಹಿತಿ ನೀಡಿದ್ದಾರೆ.

ಟಿಡಿಎಸ್‌ 1 ಉಪಗ್ರಹವನ್ನು 35 ದೇಶೀಯ ತಂತ್ರಜ್ಞಾನವನ್ನು ಪರೀಕ್ಷಿಸುವ ಉಪಕರಣಗಳ ಆಧ್ಯಯನದ ಉದ್ದೇಶದಿಂದ ಹಾರಿಬಿಡಲಾಗುತ್ತಿದೆ.

==

35 ಮಹಡಿ ಎತ್ತರದ ಎನ್‌ಜಿಎಲ್‌ವಿ ರಾಕೆಟ್‌ ಕೂಡಾ ಅಭಿವೃದ್ಧಿಹಾಲಿ ಇಸ್ರೋದ ನಂಬಿಕಸ್ಥ ರಾಕೆಟ್‌ಗಳಾಗಿರುವ ಪಿಎಸ್‌ಎಲ್‌ಜಿ, ಜಿಎಸ್‌ಎಲ್‌ವಿ ಜೊತೆಗೆ ಎನ್‌ಜಿಎಲ್‌ವಿ (ಮುಂದಿನ ಪೀಳಿಗೆಯ ಉಡಾವಣಾ ವಾಹನ) ರಾಕೆಟ್‌ ಕೂಡಾ ಅಭಿವೃದ್ಧಿಪಡಿಸುತ್ತಿದೆ. ‘1000 ಟನ್‌ ಭಾರದ ಉಪಗ್ರಹ ಹೊರಬಲ್ಲ ಸಾಮರ್ಥ್ಯದ ಈ ಹೊಸ ರಾಕೆಟ್‌ 90 ಮೀ. ಅಂದರೆ 30ರಿಂದ 35 ಮಹಡಿಯ ಕಟ್ಟಡದಷ್ಟು ಎತ್ತರವಿರಲಿದೆ. ಇದು 3 ಹಂತದಲ್ಲಿ ಉಪಗ್ರಹದ ವೇಗವನ್ನು ವೃದ್ಧಿಸಲು ಶಕ್ತವಾಗಿರಲಿದೆ. ಎನ್‌ಜಿಎಲ್‌ವಿಯ ರಚನೆಯ ಅಧ್ಯಯಯ ಪೂರ್ಣಗೊಂಡಿದ್ದು, ಎಂಜಿನ್‌ಗಳಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಇಸ್ರೋ ಅಧ್ಯಕ್ಷ ತಿಳಿಸಿದ್ದಾರೆ.