ಕ್ರೈಸ್ತರ ಮೇಲಿನ ದಾಳಿಗೆ ನನ್ನ ಹೃದಯಕ್ಕೆ ನೋವಾಗಿದೆ : ಪ್ರಧಾನಿ ನರೇಂದ್ರ ಮೋದಿ ಬೇಸರ

| Published : Dec 24 2024, 12:46 AM IST / Updated: Dec 24 2024, 03:57 AM IST

PM Modi Christmas celebration

ಸಾರಾಂಶ

ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದಾಳಿ ಮತ್ತು ಶ್ರೀಲಂಕಾದ 2019 ರ ಈಸ್ಟರ್ ಬಾಂಬ್ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಹಿಂಸಾಚಾರ ಹರಡುವ ಪ್ರಯತ್ನಗಳು ನಡೆಯುತ್ತಿರುವಾಗ ನನ್ನ ಹೃದಯಕ್ಕೆ ನೋವಾಗಿದೆ ಮತ್ತು ಸವಾಲಿನ ವಿರುದ್ಧ ಹೋರಾಡಲು ಜನರು ಒಗ್ಗೂಡಬೇಕು’  

ನವದೆಹಲಿ: ಜರ್ಮನಿಯ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದಾಳಿ ಮತ್ತು ಶ್ರೀಲಂಕಾದ 2019 ರ ಈಸ್ಟರ್ ಬಾಂಬ್ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ‘ಹಿಂಸಾಚಾರ ಹರಡುವ ಪ್ರಯತ್ನಗಳು ನಡೆಯುತ್ತಿರುವಾಗ ನನ್ನ ಹೃದಯಕ್ಕೆ ನೋವಾಗಿದೆ ಮತ್ತು ಸವಾಲಿನ ವಿರುದ್ಧ ಹೋರಾಡಲು ಜನರು ಒಗ್ಗೂಡಬೇಕು’ ಎಂದರು.

ಕ್ಯಾಥೊಲಿಕ್ ಬಿಷಪ್ ಸಂಘಟನೆ ಆಯೋಜಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಹಿಂಸೆ ಹರಡುವ ಮತ್ತು ಸಮಾಜದಲ್ಲಿ ಅಡೆತಡೆ ಉಂಟುಮಾಡುವ ಪ್ರಯತ್ನ ನಡೆಯುತ್ತಿರುವಾಗ ನನ್ನ ಹೃದಯಕ್ಕೆ ನೋವಾಗಿದೆ. 

ಕೆಲವೇ ದಿನಗಳ ಹಿಂದೆ, ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. 2019 ರಲ್ಲಿ ಈಸ್ಟರ್ ಸಮಯದಲ್ಲಿ, ಶ್ರೀಲಂಕಾದಲ್ಲಿ ಚರ್ಚ್‌ಗಳ ಮೇಲೆ ದಾಳಿ ಮಾಡಲಾಯಿತು. ನಾನು ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೊಲಂಬೋಗೆ ಹೋಗಿದ್ದೆ. ಈ ಸವಾಲುಗಳ ವಿರುದ್ಧ ಒಗ್ಗೂಡಿ ಹೋರಾಡುವುದು ಮುಖ್ಯ’ ಎಂದರು.