ಹಾಯ್‌ ಎಂದ ತೇಜಸ್ವಿ, ತಿರುಗಿಯೂ ನೋಡದ ತೇಜ್‌!

| Published : Nov 06 2025, 01:15 AM IST

ಸಾರಾಂಶ

ಬಿಹಾರ ಚುನಾವಣೆಯಲ್ಲಿ ಪರಸ್ಪರ ವಿರುದ್ಧ ಪ್ರಚಾರ ನಡೆಸುತ್ತಿರುವ ಸಹೋದರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಪಟನಾ ವಿಮಾನ ನಿಲ್ದಾಣದಲ್ಲಿ ಬುಧವಾರ ಪರಸ್ಪರ ಮುಖಾಮುಖಿ ಆದರು.

ಪಟನಾ: ಬಿಹಾರ ಚುನಾವಣೆಯಲ್ಲಿ ಪರಸ್ಪರ ವಿರುದ್ಧ ಪ್ರಚಾರ ನಡೆಸುತ್ತಿರುವ ಸಹೋದರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್, ಪಟನಾ ವಿಮಾನ ನಿಲ್ದಾಣದಲ್ಲಿ ಬುಧವಾರ ಪರಸ್ಪರ ಮುಖಾಮುಖಿ ಆದರು.

ಈ ವಿಡಿಯೋ ವೈರಲ್ ಆಗಿದ್ದು, ತೇಜ್‌ರನ್ನು ಕಂಡ ತೇಜಸ್ವಿ ಸೆಲ್ಯೂಟ್‌ ಮಾಡಿ ಹಾಯ್‌ ಎಮದರು. ಆದರೆ ತೇಜ್ ಪ್ರತಾಪ್ ಅವರು ತೇಜಸ್ವಿ ಕಡೆ ತಿರುಗಿಯೂ ನೋಡಲಿಲ್ಲ. ದುಃಖಿತ ಮುಖಭಾವದಿಂದ ಅಲ್ಲಿಂದ ಹೊರಟು ಹೋದರು.

ಅಕ್ರಮ ಸಂಬಂಧ ಆರೋಪ ಹೊತ್ತಿದ್ದ ತೇಜ್‌ರನ್ನು ತಂದೆ ಲಾಲು ಯಾದವ್‌ ಅವರು ಪಕ್ಷ ಹಾಗೂ ಕುಟುಂಬದಿಂದ ಉಚ್ಚಾಟಿಸಿದ್ದರು.