ಸಾರಾಂಶ
ತೆಲಂಗಾಣದ ನಂಬರ್‌ಪ್ಲೇಟ್‌ಗಳಲ್ಲಿರುವ ರಾಜ್ಯದ ಸಂಕೇತಗಳನ್ನು ರಾಜ್ಯ ಸರ್ಕಾರ ಬದಲಾಯಿಸಿದ್ದು, ಎಲ್ಲ ವಾಹನ ಮಾಲೀಕರೂ ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ.
ಹೈದರಾಬಾದ್: ರಾಜ್ಯದಲ್ಲಿನ ವಾಹನಗಳ ನಂಬರ್ ಪ್ಲೇಟ್ ಸಂಕೇತವನ್ನು ‘TS’ ಇಂದ ‘TG’ ಬದಲಾಯಿಸಲು ತೆಲಂಗಾಣ ಸಚಿವ ಸಂಪುಟ ಅನುಮೋದನೆ ನೀಡಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇದಕ್ಕೂ ಮೊದಲು ಇದ್ದ ಸಂಕೇತವಾದ ‘TS’ ತೆಲಂಗಾಣ ರಾಜ್ಯ (ತೆಲಂಗಾಣ ಸ್ಟೇಟ್) ಎಂಬ ವಿಸ್ತೃತ ರೂಪ ಹೊಂದಿತ್ತು.
ಭಾರತದ ಯಾವ ರಾಜ್ಯಗಳೂ ವಾಹನಗಳ ರಾಜ್ಯ ಸಂಕೇತದಲ್ಲಿ ರಾಜ್ಯ ಎಂಬ ಪದವನ್ನು ಅಡಕ ಮಾಡಿರಲಿಲ್ಲ.
ಹೀಗಾಗಿ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ರಾಜ್ಯದ ಸಂಕೇತವನ್ನು ಬದಲಾಯಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮೊದಲು ಅವಿಭಜಿತ ಆಂಧ್ರ ಪ್ರದೇಶದ ಭಾಗವಾಗಿದ್ದ ತೆಲಂಗಾಣಕ್ಕೆ ‘AP’ ಎಂಬ ರಾಜ್ಯ ಸಂಕೇತವಿತ್ತು.
2014ರಲ್ಲಿ ವಿಭಜನೆಯಾದ ನಂತರ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಸರ್ಕಾರ ಅದನ್ನು ‘TS’ಗೆ ಬದಲಾಯಿಸಿತ್ತು.