ಫ್ರೀ ಬಸ್‌ ಆಯ್ತು, ಈಗ ತೆಲಂಗಾಣದಲ್ಲಿ 1 ಕೋಟಿ ಫ್ರೀ ಸೀರೆ!

| Published : Nov 20 2025, 12:30 AM IST

ಸಾರಾಂಶ

ಈಗಾಗಲೇ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದ ತೆಲಂಗಾಣ ಸರ್ಕಾರ ಈಗ ಉಚಿತ ಸೀರೆ ಯೋಜನೆ ಜಾರಿಗೆ ತಂದಿದೆ. ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು 1 ಕೋಟಿ ಮಹಿಳೆಯರಿಗೆ ಸೇರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಬುಧವಾರ ಉದ್ಘಾಟಿಸಿದ್ದಾರೆ.

- 1 ಕೋಟಿ ಮಹಿಳೆಯರಿಗೆ ಉಚಿತ ಸೀರೆ ಸ್ಕೀಂಗೆ ಚಾಲನೆ- ಇಂದಿರಾ ಗಾಂಧಿ ಜನ್ಮದಿನ ನಿಮಿತ್ತ ಸೀರೆ ವಿತರಣೆ-ಆ ಸೀರೆ ಉಟ್ಟು ಮಹಿಳಾ ಸ್ವಾಭಿಮಾನ ಪ್ರದರ್ಶಿಸಿ: ರೆಡ್ಡಿ

ಹೈದರಾಬಾದ್‌: ಈಗಾಗಲೇ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ ಹಣ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದ ತೆಲಂಗಾಣ ಸರ್ಕಾರ ಈಗ ಉಚಿತ ಸೀರೆ ಯೋಜನೆ ಜಾರಿಗೆ ತಂದಿದೆ. ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ವಾರ್ಷಿಕೋತ್ಸವದಂದು 1 ಕೋಟಿ ಮಹಿಳೆಯರಿಗೆ ಸೇರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಬುಧವಾರ ಉದ್ಘಾಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರೆಡ್ಡಿ, ‘ಸೀರೆ ವಿತರಣೆ ಯೋಜನೆ 2 ಹಂತದಲ್ಲಿ ಈ ಯೋಜನೆ ಜಾರಿಯಾಗಲಿದೆ. ಮೊದಲು ಡಿ.9ರ ಒಳಗೆ ಗ್ರಾಮೀಣ ಭಾಗದ ಅರ್ಹ ಮಹಿಳೆಯರಿಗೆ ಸೀರೆ ನೀಡಲಾಗುವುದು. ಬಳಿಕ ಮಾ.1-8ರ ಹೊತ್ತಿಗೆ ನಗರಪ್ರದೇಶದಲ್ಲಿ 65 ಲಕ್ಷ ಸೀರೆಗಳ ವಿತರಣೆಯಾಗುವುದು. ಇಂದಿರಾ ಅವರಿಂದ ಪ್ರೇರಿತರಾಗಿ ನಮ್ಮ ಸರ್ಕಾರ ಹಲವು ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ರೆಡ್ಡಿ ಹೇಳಿದರು.

ಇದೇ ವೇಳೆ, ಆ ಸೀರೆ ಉಟ್ಟು ಮಹಿಳಾ ಸ್ವಾಭಿಮಾನವನ್ನು ಪ್ರದರ್ಶಿಸುವಂತೆ ಸಚಿವೆಯರು ಮತ್ತು ಶಾಸಕಿಯರಿಗೆ ಕರೆ ನೀಡಿದರು.