ಹಾಸ್ಟೆಲ್‌ ತಪ್ಪಿಸಿಕೊಳ್ಳಲು 33ತಾಸು ಬಸ್ಸಲ್ಲೇ ಬಾಲಕಿ ಓಡಾಟ

| Published : Dec 31 2023, 01:31 AM IST

ಹಾಸ್ಟೆಲ್‌ ತಪ್ಪಿಸಿಕೊಳ್ಳಲು 33ತಾಸು ಬಸ್ಸಲ್ಲೇ ಬಾಲಕಿ ಓಡಾಟ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸ್ಟೆಲ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್‌ ಸೇವೆಯನ್ನು ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಉಚಿತ ಬಸ್‌ ಪ್ರಯಾಣದ ಲಾಭ!

ಹೈದರಾಬಾದ್‌: ಹಾಸ್ಟೆಲ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್‌ ಸೇವೆಯನ್ನು ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು ಬಾಲಕಿಯನ್ನು ಹೈದರಾಬಾದ್‌ನ ಜ್ಯೂಬಿಲಿ ಬಸ್‌ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ನೀಡಿದ್ದಾರೆ. ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದು, ಕ್ರಿಸ್ಮಸ್‌ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಳು. ರಜೆಯ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟವಿಲ್ಲದೇ ಒಂದಾದ ಮೇಲೋಂದು ಬಸ್‌ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ. ಬಸ್‌ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ ಎಂಬುದರಿಂದ ಆತಂಕಗೊಂಡ ಆಕೆಯ ತಾತ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣವೇ ಹುಡುಕಾಟ ಆರಂಭಿಸಿದ್ದರು.