ಸಾರಾಂಶ
ತೆಲಂಗಾಣದ ರಾಜ್ಯಪಾಲೆ ತಮಿಳ್‌ಸಾಯ್ ಸೌಂದರ್‌ರಾಜನ್ ರಾಜ್ಯಪಾಲ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.
ಹೈದರಾಬಾದ್: ತೆಲಂಗಾಣದ ರಾಜ್ಯಪಾಲೆ ತಮಿಳ್‌ಸಾಯ್ ಸೌಂದರ್‌ರಾಜನ್ ರಾಜ್ಯಪಾಲ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಲಂಗಾಣದ ರಾಜ್ಯಪಾಲ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ತಮಿಳ್‌ಸಾಯ್ ಸೌಂದರ್ ರಾಜನ್ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತ ಪತ್ರವನ್ನು ಅವರು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ.
ರಾಜೀನಾಮೆ ನೀಡಿರುವ ತಮಿಳ್‌ಸಾಯ್ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 2019ರಲ್ಲಿ ಕೂಡಾ ತಮಿಳ್‌ಸಾಯ್ ತೂತ್ತುಕುಡಿಯಲ್ಲಿ ಡಿಎಂಕೆಯ ಕನಿಮೋಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.